ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ‘ಝೀಲ್‌’ ಇ–ಸ್ಕೂಟರ್‌

Last Updated 16 ಜೂನ್ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ಸುಸ್ಥಿರ ಅಭಿವೃದ್ಧಿ ಗುರಿ ಸಾಕಾರ ಮಾಡಲು ಗ್ರೀವ್ಸ್ ಮತ್ತು ಆ್ಯಂಪಿಯರ್‌ ಕಂಪನಿಗಳು ಜೊತೆಯಾಗಿದ್ದು, ವಿದ್ಯುತ್‌ ಚಾಲಿತ ಹೊಸ ‘ಝೀಲ್‌’ ಸ್ಕೂಟರ್‌ ಪರಿಚಯಿಸಿವೆ.

ವಿದ್ಯುತ್‌ ಚಾಲಿತ ವಾಹನಗಳನ್ನು ಬಳ‌ಸುವಂತೆ ಸರ್ಕಾರ ಉತ್ತೇಜಿಸುತ್ತಿದೆ. ಇದಕ್ಕಾಗಿ ಸಬ್ಸಿಡಿ ನೀಡುತ್ತಿದೆ. ಜಾಗತಿಕ ತಾಪಮಾನ ಕಡಿಮೆ ಮಾಡುವ ದಿಸೆಯಲ್ಲಿ ಕಂಪನಿಗಳ ಸಂಶೋಧನೆ ಮತ್ತು ಆವಿಷ್ಕಾರ ಪ್ರಯತ್ನವಾಗಿ ವಿದ್ಯುತ್‌ ಚಾಲಿತ ಸ್ಕೂಟರ್‌ ಅಭಿವೃದ್ಧಿಪಡಿಸಲಾಗಿದೆ. ಈ ವಾಹನಗಳನ್ನು ದೇಶದಾದ್ಯಂತ ತಲುಪಿಸುವಲ್ಲಿ ನಾವು ಮೊದಲಿಗರಾಗಿದ್ದೇವೆ. ಇದರ ಬೆಲೆ ಸಬ್ಸಿಡಿ ಸೇರಿ ₹ 66,950 ಇರಲಿದೆ’ ಎಂದು ಗ್ರೀವ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ನಾಗೇಶ್‌ ಬಸವನಹಳ್ಳಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೇಕ್‌ ಇನ್‌ ಇಂಡಿಯಾ ಮತ್ತು ಫೇಮ್‌ ಇಂಡಿಯಾ ಯೋಜನೆ ಉದ್ದೇಶಗಳನ್ನು ಈಡೇರಿಸಲು ಕಂಪನಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿವೆ. ಈ ಸ್ಕೂಟರ್‌ಗಳ ಮಾರಾಟಕ್ಕಾಗಿ 325ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದೆ. ಜೀಲ್‌ ಜೊತೆಗೆ ರಿಯೊ, ವಿ-48, ಮ್ಯಾಗ್ನಸ್‌ -60 ಸ್ಕೂಟರ್‌ಗಳು ಲಭ್ಯ ಇವೆ’ ಎಂದರು. ಆ್ಯಂಪಿಯರ್‌ನ ವ್ಯವಸ್ಥಾಪಕ ನಿರ್ದೇಶಕಿ ಹೇಮಲತಾ, ಗ್ರೀವ್ಸ್ ಅಧ್ಯಕ್ಷ ಕೆ.ವಿಜಯ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT