ಭಾನುವಾರ, ಮಾರ್ಚ್ 26, 2023
24 °C

ಜಿಆರ್‌ಟಿ ಜುವೆಲರ್ಸ್‌ನಲ್ಲಿ ಹಬ್ಬದ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ಸ್ವರ್ಣ ದೀಪಾವಳಿ’ ಕೊಡುಗೆಗಳನ್ನು ಘೋಷಿಸಿದೆ. ಇದರ ಅಡಿಯಲ್ಲಿ, ಚಿನ್ನವನ್ನು ಖರೀದಿಸುವ ಗ್ರಾಹಕರಿಗೆ, ಅವರು ಖರೀದಿಸಿದ ಚಿನ್ನದ ತೂಕಕ್ಕೆ ಸಮನಾಗಿ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಪ್ರತಿ ಕ್ಯಾರಟ್‌ ವಜ್ರ ಖರೀದಿಸಿದಾಗ 25 ಗ್ರಾಂ ಬೆಳ್ಳಿ ಉಡುಗೊರೆ, ಬೆಳ್ಳಿಯ ಆಭರಣಗಳ ಮೇಕಿಂಗ್ ಚಾರ್ಜಸ್‌ ಮೇಲೆ ಶೇ 25ರಷ್ಟು ರಿಯಾಯಿತಿ, ಬೆಳ್ಳಿ ಆಭರಣಗಳ ಬೆಲೆಯ ಮೇಲೆ ಶೇ 10ರಷ್ಟು ರಿಯಾಯಿತಿ ಕೊಡುಗೆಗಳೂ ಇವೆ ಎಂದು ಪ್ರಕಟಣೆ ತಿಳಿಸಿದೆ.

‘ನಮ್ಮ ಪಾಲಿಗೆ ಗ್ರಾಹಕರೇ ಯಾವತ್ತಿಗೂ ಮೊದಲು’ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಅನಂತಪದ್ಮನಾಭನ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.