ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿ: ₹1.73 ಲಕ್ಷ ಕೋಟಿ ಸಂಗ್ರಹ

Published 1 ಜೂನ್ 2024, 15:28 IST
Last Updated 1 ಜೂನ್ 2024, 15:28 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ 2024–25ರ ಹಣಕಾಸು ವರ್ಷದ ಮೇ ನಲ್ಲಿ ₹1.73 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 10ರಷ್ಟು ಏರಿಕೆಯಾಗಿದೆ. ಆಮದು ಪ್ರಮಾಣ ನಿಧಾನಗತಿಯ ನಡುವೆಯೂ ದೇಶೀಯ ವಹಿವಾಟು ಹೆಚ್ಚಳದಿಂದ ವರಮಾನ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.

ಏಪ್ರಿಲ್‌ನಲ್ಲಿ ₹2.10 ಲಕ್ಷ ಕೋಟಿ ದಾಖಲೆಯ ಗರಿಷ್ಠ ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ತಿಂಗಳು ಮರುಪಾವತಿ ನಂತರ ನಿವ್ವಳ ಜಿಎಸ್‌ಟಿ ವರಮಾನವು ₹1.44 ಲಕ್ಷ ಕೋಟಿಯಾಗಿದ್ದು, ಕಳೆದ ಅವಧಿಗೆ ಹೋಲಿಸಿದರೆ ಶೇ 6.9ರಷ್ಟು ಹೆಚ್ಚಳವಾಗಿದೆ.

ಮೇ ವರೆಗೆ ಒಟ್ಟು ₹3.83 ಲಕ್ಷ ಕೋಟಿ ಸಂಗ್ರಹವಾಗಿದ್ದು, ಶೇ 11.3ರಷ್ಟು ಬೆಳವಣಿಗೆ ಆಗಿದೆ. ಮರುಪಾವತಿ ನಂತರ ನಿವ್ವಳ ಜಿಎಸ್‌ಟಿ ಆದಾಯವು ₹3.36 ಲಕ್ಷ ಕೋಟಿಗಳಷ್ಟಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 11.6 ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕರ್ನಾಟಕದಲ್ಲಿ ₹11,889 ಕೋಟಿ ಸಂಗ್ರಹ: ಕರ್ನಾಟಕದಲ್ಲಿ ₹11,889 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಶೇ 15ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹10,317 ಕೋಟಿ ಸಂಗ್ರಹವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT