ನವದೆಹಲಿ: ಈ ವರ್ಷದ ದೀಪಾವಳಿ ಹಬ್ಬದೊಳಗಾಗಿ ಜಿಎಸ್ಟಿ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಶೇ 5 ಹಾಗೂ ಶೇ 18 ಸ್ಲ್ಯಾಬ್ಗಳನ್ನು ಮಾತ್ರ ಉಳಿಸಿಕೊಳ್ಳಲಿದೆ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ಗೊತ್ತಾಗಿದೆ.
.ಕಾಯ್ದೆಗೆ ತಿದ್ದುಪಡಿ: ಜಿಎಸ್ಟಿ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ.
ಸದ್ಯ ಅಗತ್ಯ ಆಹಾರ ವಸ್ತುಗಳ ಮೇಲೆ ಶೂನ್ಯ, ದಿನನಿತ್ಯದ ವಸ್ತುಗಳ ಮೇಲೆ ಶೇ 5, ಸಾಮಾನ್ಯ ದರ್ಜೆಯ ವಸ್ತುಗಳ ಮೇಲೆ ಶೇ 12, ಎಲೆಕ್ಟ್ರಾನಿಕ್ಸ್ ಹಾಗೂ ಸೇವಾ ಉತ್ಪನ್ನಗಳ ಮೇಲೆ ಶೇ 18 ಮತ್ತು ವಿಲಾಸಿ ಹಾಗೂ ಮದ್ಯ, ತಂಬಾಕು ಉತ್ಪನ್ನಗಳಿಗೆ ಶೇ 28ರಷ್ಟು ತೆರಿಗೆ ಹೇರಲಾಗುತ್ತಿದೆ. ಪರಿಷ್ಕೃತ ವ್ಯವಸ್ಥೆಯಲ್ಲಿ ಶೇ 5 ಹಾಗೂ ಶೇ18ರ ಸ್ಲ್ಯಾಬ್ ಜೊತೆಗೆ ವಿಲಾಸಿ ಹಾಗೂ ಮದ್ಯ, ತಂಬಾಕು ಉತ್ಪನ್ನಗಳಿಗೆ ಶೇ 40ರ ವಿಶೇಷ ದರ ಇರಲಿದೆ ಎಂದು ತಿಳಿದು ಬಂದಿದೆ.

ಪರಿಷ್ಕೃತ ಸ್ವರೂಪಕ್ಕೆ ಜಿಎಸ್ಟಿ ಕೌನ್ಸಿಲ್ನ ಒಪ್ಪಿಗೆ ಸಿಕ್ಕರೆ, ಸದ್ಯ ಶೇ 12ರ ಪರಧಿಯಲ್ಲಿರುವ ಶೇ 99 ಉತ್ಪನ್ನಗಳು ಶೇ 5ರ ಸ್ಲ್ಯಾಬ್ಗೂ, ಶೇ 28ರ ಅಡಿಯಲ್ಲಿ ಬರುವ ಶೇ 90ರಷ್ಟು ವಸ್ತುಗಳು ಶೇ 18ರ ಸ್ಲ್ಯಾಬ್ನೊಳಗೆ ಬರಲಿದೆ ಎನ್ನಲಾಗಿದೆ.
.ಕರ್ನಾಟಕದಲ್ಲಿ ₹39577 ಕೋಟಿ ಜಿಎಸ್ಟಿ ವಂಚನೆ: ಸಚಿವೆ ನಿರ್ಮಲಾ ಸೀತಾರಾಮನ್ .
ಶೇ 40ರ ತೆರಿಗೆ ಕೇವಲ 7 ಉತ್ಪನ್ನಗಳಿಗೆ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿದ್ದು, ತಂಬಾಕು ಉತ್ಪನ್ನಗಳು ಇದರಡಿ ಬರಬಹುದು ಎಂದು ಅವರು ಹೇಳಿದ್ದಾರೆ. ಆದರೆ ಅವುಗಳ ಮೇಲೆ ಸದ್ಯ ಇರುವ ಒಟ್ಟು ತೆರಿಗೆ ಶೇ 88 ಹಾಗೇ ಮುಂದುವರಿಯಲಿದೆ.

ಪರಿಷ್ಕೃತ ತೆರಿಗೆ ವ್ಯವಸ್ಥೆಯಿಂದ ಬಳಕೆ ಹೆಚ್ಚಲಿದ್ದು, ಸ್ಲ್ಯಾಬ್ ಬದಲಾವಣೆಯಿಂದ ಆಗಲಿರುವ ಸಾಂಭವ್ಯ ವರಮಾನ ಖೋತಾವನ್ನು ಮೀರಲಿದೆ ಎಂದು ಅವರು ಹೇಳಿದ್ದಾರೆ.
.₹7 ಲಕ್ಷ ಕೋಟಿ ಜಿಎಸ್ಟಿ ವಂಚನೆ ಪತ್ತೆ: ಕೇಂದ್ರ ಹಣಕಾಸು ಇಲಾಖೆ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.