ಬುಧವಾರ, ಆಗಸ್ಟ್ 17, 2022
25 °C

ಸಣ್ಣ ಉದ್ದಿಮೆ: ಜನವರಿಯಿಂದ 3 ತಿಂಗಳಿಗೊಮ್ಮೆ ರಿಟರ್ನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಾರ್ಷಿಕ ₹ 5 ಕೋಟಿವರೆಗೆ ವಹಿವಾಟು ನಡೆಸುವ ಸಣ್ಣ ಉದ್ದಿಮೆಗಳು ಜನವರಿಯಿಂದ ಮೂರು ತಿಂಗಳಿಗೊಮ್ಮೆ ಜಿಎಸ್‌ಟಿಆರ್‌–3ಬಿ ಸಲ್ಲಿಸಿದರೆ ಸಾಕು ಎಂದು ಮೂಲಗಳು ಹೇಳಿವೆ.

ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಸುವ ಈ ಕ್ರಮದಿಂದಾಗಿ 94 ಲಕ್ಷ ತೆರಿಗೆದಾರರಿಗೆ ಅನುಕೂಲ ಆಗಲಿದೆ. ಒಟ್ಟಾರೆ ಜಿಎಸ್‌ಟಿ ಪಾವತಿದಾರರಲ್ಲಿ ಇವರ ಪಾಲು ಶೇಕಡ 92ರಷ್ಟಿದೆ.

ಸದ್ಯ ತಿಂಗಳಿಗೆ ಒಂದರಂತೆ ವರ್ಷಕ್ಕೆ ಒಟ್ಟಾರೆ 12 ಜಿಎಸ್‌ಟಿಆರ್‌–3ಬಿ ರಿಟರ್ನ್ಸ್‌ ಸಲ್ಲಿಸಬೇಕಿದೆ. ಜನವರಿಯಿಂದ ಮೂರು ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ನಾಲ್ಕು ರಿಟರ್ನ್ಸ್‌ ಮಾತ್ರ ಸಲ್ಲಿಸಬೇಕಾಗಲಿದೆ.

₹ 5 ಕೋಟಿವರೆಗೆ ವಾರ್ಷಿಕ ವಹಿವಾಟು ನಡೆಸುವವರು 2021ರ ಜನವರಿ 1ರಿಂದ ಜಾರಿಗೆ ಬರುವಂತೆ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್‌ ಸಲ್ಲಿಸಿದರೆ ಸಾಕು ಎಂದು ಅಕ್ಟೋಬರ್‌ನಲ್ಲಿ ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.