ಸೆಷೆಲ್ಸ್ಗೆ ಎಚ್ಎಎಲ್ ವಿಮಾನ ಹಸ್ತಾಂತರ

ನವದೆಹಲಿ: ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿರುವ ‘ಡೋರ್ನಿಯರ್-228' ವಿಮಾನವನ್ನು ಸೆಷೆಲ್ಸ್ಗೆ ಹಸ್ತಾಂತರಿಸಲಾಗಿದೆ.
ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಸೆಷೆಲ್ಸ್ ಅಧ್ಯಕ್ಷ ಡ್ಯಾನಿ ಫೌರೆ ಅವರಿಗೆ ಈ ವಿಮಾನ ಹಸ್ತಾಂತರಿಸಿದರು.
ಈ ವಿಮಾನದ ಸೇರ್ಪಡೆಯಿಂದ ದ್ವೀಪ ರಾಷ್ಟ್ರ ಸೆಷೆಲ್ಸ್ನ ಕರಾವಳಿ ಪ್ರದೇಶದ ಕಣ್ಗಾವಲು ವ್ಯವಸ್ಥೆ ಬಲಗೊಳ್ಳಲಿದೆ.
‘ಈ ವಿಮಾನದ ಸೇರ್ಪಡೆಯಿಂದ ಸೆಷೆಲ್ಸ್ನ ಪ್ರತ್ಯೇಕ ಆರ್ಥಿಕ ವಲಯದ ಕಾವಲಿಗೆ ಹೊಸ ಬಲ ಸೇರ್ಪಡೆಯಾಗಲಿದೆ’ ಎಂದು ಡ್ಯಾನಿ ಫೌರೆ ಹೇಳಿದ್ದಾರೆ.
ಇದೇ 29ರಂದು ನಡೆಯಲಿರುವ ಸೆಷೆಲ್ಸ್ನ 42ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ವಿಮಾನ ಅಲ್ಲಿನ ಕರಾವಳಿ ಕಾವಲು ಪಡೆಗೆ ಸೇರ್ಪಡೆಗೊಳ್ಳಲಿದೆ.
ಈ ವಿಮಾನದ ಹಸ್ತಾಂತರದಿಂದ ಎರಡೂ ದೇಶಗಳ ದ್ವಿಪಕ್ಷೀಯ ರಕ್ಷಣಾ ಬಾಂಧವ್ಯ ಗಟ್ಟಿಗೊಳ್ಳಲಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
‘ಸಂಸ್ಥೆಯ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದೆ. ವಿಮಾನದ ನಿರ್ವಹಣೆಗೆ ಸೆಷೆಲ್ಸ್ನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದು ಎಚ್ಎಎಲ್ನ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿರುವ ನಿವೃತ್ತ ಜನರಲ್ ವಿ. ಕೆ. ಸಿಂಗ್, ವೈಸ್ ಆ್ಯಡ್ಮಿರಲ್ ಜಿ. ಅಶೋಕ್ ಕುಮಾರ್ ಅವರು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.