ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ: ಹೊಸ ಮಾರ್ಗದರ್ಶಿ ಸೂತ್ರ ನೀಡಿದ ಐಆರ್‌ಡಿಎಐ

Last Updated 14 ಜೂನ್ 2020, 15:02 IST
ಅಕ್ಷರ ಗಾತ್ರ

ನವದೆಹಲಿ: ನಿರಂತರವಾಗಿ ಎಂಟು ವರ್ಷಗಳವರೆಗೆ ಆರೋಗ್ಯ ವಿಮೆಯ ಕಂತುಗಳನ್ನು ಪಾವತಿಸಿದ ಸಂದರ್ಭಗಳಲ್ಲಿ ಕ್ಲೇಮ್‌ ಪ್ರಶ್ನಿಸಬಾರದು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಹೊಸ ಮಾರ್ಗದರ್ಶಿ ಸೂತ್ರದಲ್ಲಿ ವಿಮಾ ಕಂಪನಿಗಳಿಗೆ ತಿಳಿಸಿದೆ.

ಆರೋಗ್ಯ ವಿಮಾ ಯೋಜನೆಗಳ ಒಪ್ಪಂದದ ಸಾಮಾನ್ಯ ನಿಯಮಗಳು ಮತ್ತು ವಿಧಿಗಳನ್ನು ಸರಳಗೊಳಿಸುವ ಹಾಗೂ ಉದ್ದಿಮೆಯಲ್ಲಿ ಏಕರೂಪತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದೆ.

ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲಾ ಆರೋಗ್ಯ ವಿಮೆ ಯೋಜನೆಗಳನ್ನು 2021ರ ಏಪ್ರಿಲ್‌ನಿಂದ ನವೀಕರಿಸುವಾಗಮಾರ್ಗದರ್ಶಿ ‌ಸೂತ್ರಗಳಲ್ಲಿ ಬದಲಾವಣೆ ಮಾಡಿ ಹೊಸ ಅಂಶಗಳನ್ನು ಸೇರಿಸಲಾಗುವುದು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT