ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ: ಘಟಕಗಳು ತಾತ್ಕಾಲಿಕ ಸ್ಥಗಿತ

Last Updated 21 ಏಪ್ರಿಲ್ 2021, 5:12 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಹೀರೊ ಮೋಟೊಕಾರ್ಪ್‌ ಕಂಪನಿಯು ದೇಶದ ಎಲ್ಲ ಘಟಕಗಳಲ್ಲಿ ದ್ವಿಚಕ್ರ ವಾಹನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ.

ಹರಿಯಾಣ ರಾಜ್ಯದ ಗುರುಗ್ರಾಮ ಮತ್ತು ಧಾರೂಹೆರಾ, ಆಂಧ್ರಪ್ರದೇಶದ ಚಿತ್ತೂರು, ಉತ್ತರಾಖಂಡ ರಾಜ್ಯದ ಹರಿದ್ವಾರ, ರಾಜಸ್ಥಾನದ ನೀಮ್ರಾನಾ ಮತ್ತು ಗುಜರಾತ್‌ನ ಹಲೋಲ್‌ನಲ್ಲಿ ಕಂಪನಿಯ ಘಟಕಗಳು ಇವೆ.

‘ಪ್ರತಿ ಘಟಕವೂ ಏಪ್ರಿಲ್‌ 22ರಿಂದ ಮೇ 1ರ ನಡುವೆ ನಾಲ್ಕು ದಿನಗಳವರೆಗೆ ಸ್ಥಗಿತಗೊಳ್ಳಲಿದೆ’ ಎಂದು ಕಂಪನಿ ಹೇಳಿದೆ. ಸ್ಥಗಿತದ ಅವಧಿಯನ್ನು ಕಂಪನಿಯು ಆಯಾ ಘಟಕಗಳಲ್ಲಿ ನಿರ್ವಹಣಾ ಕಾರ್ಯ ನಡೆಸಲು ಬಳಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT