ಶುಕ್ರವಾರ, ಡಿಸೆಂಬರ್ 13, 2019
26 °C

ಬೆಂಗಳೂರು ಹೋಮ್‌ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುರವಂಕರದ ಅಂಗಸಂಸ್ಥೆಯಾಗಿರುವ ಕೈಗೆಟುಕುವ ಗೃಹ ನಿರ್ಮಾಣ ಸಂಸ್ಥೆ ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌, ಇದೇ 15ರಿಂದ 17ರವರೆಗೆ ನಗರದಲ್ಲಿ ‘ಬೆಂಗಳೂರು ಹೋಮ್‌ ಹಬ್ಬ’ ಹೆಸರಿನ ವಸತಿ ಯೋಜನೆಗಳ ಪ್ರದರ್ಶನ ಏರ್ಪಡಿಸಿದೆ.

ಈ ಕಾರ್ಯಕ್ರಮವನ್ನು ಕೆಂಪೇಗೌಡ ರಸ್ತೆಯ ಶಿಕ್ಷಣ ಸದನದಲ್ಲಿ ಆಯೋಜಿಸಲಾಗಿದ್ದು, ಸರ್ಕಾರಿ ನೌಕರರು ಮತ್ತು
ಕೇಂದ್ರೋದ್ಯಮಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಗಿದೆ.

ಈ ಹಬ್ಬದಲ್ಲಿ ಪ್ರತಿ ಮನೆಯ ಬುಕಿಂಗ್‌ಗೆ ₹ 25 ಸಾವಿರ ಮೌಲ್ಯದ ಚಿನ್ನದ ವೋಚರ್‌ ಸಿಗಲಿದೆ. ಮೂವರು ಅದೃಷ್ಟಶಾಲಿ ವಿಜೇತರಿಗೆ ತಲಾ ₹ 50 ಸಾವಿರದ ಚಿನ್ನದ ವೋಚರ್‌ ಸಿಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು