ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಕೌಟುಂಬಿಕ ಸಾಲ ಪ್ರಮಾಣ

Last Updated 15 ಸೆಪ್ಟೆಂಬರ್ 2021, 10:30 IST
ಅಕ್ಷರ ಗಾತ್ರ

ಮುಂಬೈ: ದೇಶದ ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಹೋಲಿಸಿದರೆ ಕೌಟುಂಬಿಕದ ಸಾಲದ ಪ್ರಮಾಣವು ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ 34ಕ್ಕೆ ಇಳಿಕೆ ಆಗಿರಬಹುದು ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಅಂದಾಜಿಸಿದೆ.

2020–21ರಲ್ಲಿ ಸಾಲದ ಪ್ರಮಾಣವು ಒಟ್ಟು ಜಿಡಿಪಿಯ ಶೇ 37.3ಕ್ಕೆ ಹೆಚ್ಚಳವಾಗಿತ್ತು. 2019–20ರಲ್ಲಿ ಸಾಲದ ಪ್ರಮಾಣವು ಶೇ 32.5ರಷ್ಟು ಮಾತ್ರ ಆಗಿತ್ತು ಎಂದು ಎಸ್‌ಬಿಐನ ಎಕೊವ್ರ್ಯಾಪ್ ವರದಿಯು ಹೇಳಿದೆ.

ಪ್ರಮಾಣದ ಲೆಕ್ಕದಲ್ಲಿ ಸಾಲವು ಕಡಿಮೆ ಆಗಿದ್ದರೂ ಮೊತ್ತದ ಲೆಕ್ಕದಲ್ಲಿ ಸಾಲ ಜಾಸ್ತಿ ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹ 73.59 ಲಕ್ಷ ಕೋಟಿ ಆಗಿದ್ದ ಕೌಟುಂಬಿಕ ಸಾಲವು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 75 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಈಚೆಗೆ ಬಿಡುಗಡೆ ಆಗಿರುವ ‘ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆ – 2018’ (ಎಐಡಿಐಎಸ್) ವರದಿಯ ಪ್ರಕಾರ, ಗ್ರಾಮೀಣ ಕುಟುಂಬಗಳ ಸರಾಸರಿ ಸಾಲದ ಮೊತ್ತವು 2012ರಿಂದ 2018ರ ನಡುವಿನ ಅವಧಿಯಲ್ಲಿ ₹ 59,748 ಆಗಿತ್ತು. ಸರಾಸರಿ ಸಾಲದ ಮೊತ್ತವು ನಗರ ಪ್ರದೇಶಗಳ ಕುಟುಂಬಗಳಲ್ಲಿ ₹ 1.20 ಲಕ್ಷ ಆಗಿತ್ತು.

‘2021ರಲ್ಲಿ ಗ್ರಾಮೀಣ ಪ್ರದೇಶಗಳ ಕುಟುಂಬಗಳ ಸರಾಸರಿ ಸಾಲದ ಮೊತ್ತವು ₹ 1.16 ಲಕ್ಷಕ್ಕೆ, ನಗರ ಪ್ರದೇಶಗಳ ಕುಟುಂಬಗಳ ಸರಾಸರಿ ಸಾಲದ ಮೊತ್ತವು ₹ 2.33 ಲಕ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಅಂದರೆ, ಕೋವಿಡ್‌ ಸಾಂಕ್ರಾಮಿಕವು ಕುಟುಂಬಗಳ ಮೇಲೆ ಗಣನೀಯ ಪರಿಣಾಮ ಉಂಟುಮಾಡಿದೆ’ ಎಂದು ಎಸ್‌ಬಿಐ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT