ನವದೆಹಲಿ/ಬೆಂಗಳೂರು: ಉಳಿತಾಯ ಖಾತೆಯಲ್ಲಿ ಇರಿಸಬೇಕಿರುವ ಕನಿಷ್ಠ ಮೊತ್ತವನ್ನು ಐಸಿಐಸಿಐ ಬ್ಯಾಂಕ್ ಹೆಚ್ಚು ಮಾಡಿದೆ. ಹೊಸ ನಿಯಮದ ಪ್ರಕಾರ ಐಸಿಐಸಿಐ ಬ್ಯಾಂಕ್ನ ಮಹಾನಗರ ಮತ್ತು ನಗರ ಪ್ರದೇಶಗಳ ಗ್ರಾಹಕರು ತಮ್ಮ ಖಾತೆಯಲ್ಲಿ ಇರಿಸಬೇಕಿರುವ ಕನಿಷ್ಠ ಮಾಸಿಕ ಸರಾಸರಿ ಮೊತ್ತ (ಎಂಎಂಎಬಿ) ₹50 ಸಾವಿರ ಆಗಿದೆ.

ಹೊಸ ನಿಯಮವು ಆಗಸ್ಟ್ 1ರ ನಂತರ ತೆರೆದ ಖಾತೆಗಳಿಗೆ ಅನ್ವಯ ಆಗುತ್ತದೆ. ಮಹಾನಗರ ಹಾಗೂ ನಗರ ಪ್ರದೇಶಗಳ ಗ್ರಾಹಕರು ಇದುವರೆಗೆ ತಮ್ಮ ಖಾತೆಗಳಲ್ಲಿ ಮಾಸಿಕ ಸರಾಸರಿ ಮೊತ್ತವಾಗಿ ₹10 ಸಾವಿರ ಇರಿಸಿದ್ದರೆ ಸಾಕಿತ್ತು. ಆಗಸ್ಟ್ 1ಕ್ಕೆ ಮೊದಲು ಖಾತೆ ತೆರೆದಿರುವ ಗ್ರಾಹಕರಿಗೆ ಹಳೆಯ ನಿಯಮವೇ ಅನ್ವಯ ಆಗುತ್ತದೆ.

ಅರೆ ನಗರ ಪ್ರದೇಶಗಳ ಗ್ರಾಹಕರು ಇರಿಸಬೇಕಿರುವ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ₹25 ಸಾವಿರಕ್ಕೆ, ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಈ ಮೊತ್ತವನ್ನು ₹10 ಸಾವಿರಕ್ಕೆ ಹೆಚ್ಚು ಮಾಡಲಾಗಿದೆ. ಈ ವಿವರಗಳು ಐಸಿಐಸಿಐ ಬ್ಯಾಂಕ್ನ ವೆಬ್ಸೈಟ್ನಲ್ಲಿ ಲಭ್ಯವಿವೆ.

ಗ್ರಾಹಕರು ಕನಿಷ್ಠ ಮೊತ್ತವನ್ನು ಇರಿಸಲು ವಿಫಲವಾದಲ್ಲಿ ₹500 ಅಥವಾ ಕೊರತೆ ಮೊತ್ತದ ಶೇ 6ರಷ್ಟನ್ನು ದಂಡದ ರೂಪದಲ್ಲಿ ಬ್ಯಾಂಕ್ಗೆ ಪಾವತಿಸಬೇಕಾಗುತ್ತದೆ. ಈ ಎರಡು ಮೊತ್ತಗಳಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ದಂಡವಾಗಿ ಪಡೆಯಲಾಗುತ್ತದೆ.

ವೇತನ ಖಾತೆ, ಜನಧನ ಖಾತೆ ಹಾಗೂ ಮೂಲ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ಪರಿಷ್ಕೃತ ನಿಯಮಗಳು ಅನ್ವಯ ಆಗುವುದಿಲ್ಲ.

ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್ಗಳು ಕನಿಷ್ಠ ಮೊತ್ತ ಕಾಪಾಡಿಕೊಳ್ಳಬೇಕು ಎಂಬ ನಿಯಮವನ್ನು ಈಚೆಗೆ ರದ್ದುಪಡಿಸಿವೆ. ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ಇರಿಸಿಕೊಳ್ಳಬೇಕು ಎಂಬ ನಿಯಮ ಇಲ್ಲ, ಖಾತೆಗಳಲ್ಲಿ ಮೊತ್ತವನ್ನು ಶೂನ್ಯಕ್ಕೆ ತಂದುಕೊಂಡರೆ ದಂಡವೂ ಇರುವುದಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಈಚೆಗೆ ಹೇಳಿದೆ.

ಇದೇ ರೀತಿ ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಕೂಡ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಇಲ್ಲವಾಗಿಸಿವೆ.

ಐಸಿಐಸಿಐ ಬ್ಯಾಂಕ್ನ ಈ ಕ್ರಮಕ್ಕೆ ಕೆಲವರು ವಿರೋಧ ದಾಖಲಿಸಿದ್ದಾರೆ. ‘ಮಾಸಿಕ ಸರಾಸರಿ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸಿ, ವಹಿವಾಟುಗಳಿಗೆ ಹೆಚ್ಚಿನ ಮೌಲ್ಯ ತಂದುಕೊಡದ ಗ್ರಾಹಕರನ್ನು ತನ್ನಿಂದ ದೂರ ಸರಿಸುವ ಉದ್ದೇಶವನ್ನು ಐಸಿಐಸಿಐ ಬ್ಯಾಂಕ್ ಹೊಂದಿದೆ. ಹೀಗೆ ಮಾಡುವುದರಿಂದ ಬ್ಯಾಂಕಿಗೆ ಶ್ರೀಮಂತ ವರ್ಗದ ಗ್ರಾಹಕರ ಮೇಲೆ ಗಮನ ನೀಡಲು, ಅವರಿಗೆ ಇತರ ಹಣಕಾಸಿನ ಉತ್ಪನ್ನಗಳನ್ನು ಮಾರಾಟ ಮಾಡಲು ಆಗುತ್ತದೆ. ಈ ಕ್ರಮಕ್ಕೆ ಯಶಸ್ಸು ಸಿಕ್ಕರೆ ಇತರ ಕೆಲವು ಖಾಸಗಿ ಬ್ಯಾಂಕ್ಗಳೂ ಇದೇ ಕ್ರಮ ಅನುಸರಿಸಬಹುದು’ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.