ನವದೆಹಲಿ: ಐಸಿಐಸಿಐ ಬ್ಯಾಂಕ್ನ ಅಂಗಸಂಸ್ಥೆಯಾಗಿರುವ ಐಸಿಐಸಿಐ ಪ್ರುಡೆನ್ಶಿಯಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯು ಐಪಿಒ ಮೂಲಕ ತನ್ನ ಷೇರುಗಳನ್ನು ಮಾರಾಟ ಮಾಡಲು ಸಜ್ಜಾಗುತ್ತಿದೆ. ಐಪಿಒ ಡಿಸೆಂಬರ್ 12ರಿಂದ ನಡೆಯುವ ನಿರೀಕ್ಷೆ ಇದೆ.

ಐಪಿಒ ಮೂಲಕ ₹10 ಸಾವಿರ ಕೋಟಿ ಸಂಗ್ರಹಿಸಬಹುದು ಎಂದು ಮೂಲಗಳು ಹೇಳಿವೆ. ಆರಂಭಿಕ ಹೂಡಿಕೆದಾರರಿಗೆ (ಆ್ಯಂಕರ್ ಇನ್ವೆಸ್ಟರ್ಸ್) ಡಿಸೆಂಬರ್ 11ರಂದು ಬಿಡ್ ಸಲ್ಲಿಸಲು ಅವಕಾಶ ಇರಲಿದೆ.

ಕಂಪನಿಯ ಪ್ರವರ್ತಕ ಸಂಸ್ಥೆ ಬ್ರಿಟನ್ ಮೂಲಕ ಪ್ರುಡೆನ್ಶಿಯಲ್ ಕಾರ್ಪೊರೇಷನ್ ಹೋಲ್ಡಿಂಗ್ಸ್ ತನ್ನ 4.89 ಕೋಟಿ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲಿದೆ. ಪ್ರವರ್ತಕರು ಈಗಾಗಲೇ ಇರುವ ಷೇರುಗಳನ್ನು ಮಾರಾಟ ಮಾಡಲಿರುವುದರಿಂದ (ಒಎಫ್ಎಸ್), ಸಂಗ್ರಹ ಆಗುವ ಬಂಡವಾಳವು ನೇರವಾಗಿ ಪ್ರವರ್ತಕರ ಕೈ ಸೇರಲಿದೆ.

ಈಗ ಈ ಕಂಪನಿಯಲ್ಲಿ ಐಸಿಐಸಿಐ ಬ್ಯಾಂಕ್ ಶೇ 51ರಷ್ಟು ಷೇರು ಹೊಂದಿದೆ. ಇನ್ನುಳಿದ ಶೇ 49ರಷ್ಟು ಷೇರುಗಳು ಪ್ರುಡೆನ್ಶಿಯಲ್ ಕಾರ್ಪೊರೇಷನ್ ಹೋಲ್ಡಿಂಗ್ಸ್ ಬಳಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.