ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020–21ನೇ ಹಣಕಾಸು ವರ್ಷ: ಐಡಿಬಿಐ ಬ್ಯಾಂಕ್‌ ನಿವ್ವಳ ಲಾಭ ₹ 1,359 ಕೋಟಿ

Last Updated 3 ಮೇ 2021, 14:44 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿಯಂತ್ರಣದಲ್ಲಿರುವ ಐಡಿಬಿಐ ಬ್ಯಾಂಕ್‌, ಐದು ವರ್ಷಗಳ ಬಳಿಕ ಲಾಭದತ್ತ ಮುಖ ಮಾಡಿದೆ. 2020–21ನೇ ಹಣಕಾಸು ವರ್ಷದಲ್ಲಿ ₹ 1,359 ಕೋಟಿ ನಿವ್ವಳ ಲಾಭ ಗಳಿಸಿದೆ.

2019–20ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ₹ 12,887 ಕೋಟಿ ನಷ್ಟ ಅನುಭವಿಸಿತ್ತು. 2020–21ನೇ ಹಣಕಾಸು ವರ್ಷಕ್ಕೆ ಒಟ್ಟಾರೆ ವರಮಾನವು ₹ 25,295 ಕೋಟಿಗಳಿಂದ ₹ 24,557 ಕೋಟಿಗೆ ಇಳಿಕೆ ಕಂಡಿದೆ.

2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 512 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ವರಮಾನವು ₹ 6,924.94 ಕೋಟಿಯಿಂದ ₹ 6,969.59 ಕೋಟಿಗೆ ಏರಿಕೆಯಾಗಿದೆ.

ಮಾರ್ಚ್‌ನಲ್ಲಿ ಆರ್‌ಬಿಐನ ಕಠಿಣ ಸ್ವರೂಪದ ನಿರ್ಬಂಧಗಳಿಂದ ಬ್ಯಾಂಕ್ ಹೊರಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT