ಮಂಗಳವಾರ, ಆಗಸ್ಟ್ 3, 2021
22 °C

ರೈತರಿಗಾಗಿ ಫೇಸ್‌ಬುಕ್‌ ಲೈವ್‌ ಕಾರ್ಯಾಗಾರ: ಇಫ್ಕೊ ಕಿಸಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರಿಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡಲು ಇಫ್ಕೊ ಕಿಸಾನ್‌, ಪ್ರತಿ ದಿನವೂ ಬೆಳಿಗ್ಗೆ 11 ಗಂಟೆಗೆ ಫೇಸ್‌ಬುಕ್‌ ಲೈವ್ ಕಾರ್ಯಾಗಾರ ನಡೆಸುತ್ತಿದೆ. 

ಕೃಷಿ ಮತ್ತು ಪೂರಕ ವಲಯಗಳಲ್ಲಿ ಉತ್ಪಾದನೆ ಹೆಚ್ಚಿಸುವುದು ಹೇಗೆ ಎನ್ನುವ ಕುರಿತು ಮೌಲ್ಯಯುತವಾದ ಮಾಹಿತಿಗಳನ್ನು ಇಫ್ಕೊ ಕಿಸಾನ್‌ ನೀಡಲಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರು ಗಮನ ಹರಿಸಬೇಕಿರುವ ಅಂಶಗಳ ಬಗ್ಗೆ ಕಾರ್ಯಾಗಾರವು ಕೇಂದ್ರೀಕೃತವಾಗಿದ್ದು, ತಜ್ಞರೊಂದಿಗೆ ಸಂವಾದ ನಡೆಸುವ ಮೂಲಕ ರೈತರು ತಮ್ಮ ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು’ ಎಂದು ಇಫ್ಕೊ ಕಿಸಾನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಮಲ್ಹೋತ್ರಾ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು