ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ತಗ್ಗಿಸುವ ಗುರಿ ತಲುಪದ ಐಎಲ್‌ಎಫ್‌ಎಸ್‌

Last Updated 24 ಅಕ್ಟೋಬರ್ 2020, 17:56 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿಎರಡನೇ ತ್ರೈಮಾಸಿಕದಲ್ಲಿ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳುವ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಮೂಲಸೌಕರ್ಯ ಗುತ್ತಿಗೆ ಮತ್ತು ಹಣಕಾಸು ಸೇವೆಗಳ (ಐಎಲ್‌ಆ್ಯಂಡ್‌ಎಫ್‌ಎಸ್‌) ಸಮೂಹ ತಿಳಿಸಿದೆ.

2020–21ರ ಎರಡನೇ ತ್ರೈಮಾಸಿಕದಲ್ಲಿ ₹ 8,800 ಕೋಟಿ ಸಾಲ ತೀರಿಸುವ ಯೋಜನೆ ಇಟ್ಟುಕೊಂಡಿತ್ತು. ಆದರೆ, ಕೇವಲ ₹ 1,460 ಕೋಟಿ ಸಾಲವನ್ನು ಮಾತ್ರವೇ ತೀರಿಸಲು ಸಾಧ್ಯವಾಗಿದೆ. ಹೀಗಾಗಿ ಉಳಿದ ₹ 7,300 ಕೋಟಿ ಸಾಲವನ್ನು 3 ಮತ್ತು 4ನೇ ತ್ರೈಮಾಸಿಕಗಳಲ್ಲಿ ತೀರಿಸುವುದಾಗಿ ಹೇಳಿದೆ.

2020ರ ಜೂನ್‌ 30ರವರೆಗೆ ₹ 17,640 ಕೋಟಿ ಮೊತ್ತದ ಸಾಲವನ್ನು ಇತ್ಯರ್ಥಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹ 99 ಸಾವಿರ ಕೋಟಿ ಸಾಲದಲ್ಲಿ 2021 ಮಾರ್ಚ್ ಒಳಗಾಗಿ ₹ 50,500 ಕೋಟಿ ಸಾಲ ಕಡಿಮೆ ಮಾಡಿಕೊಳ್ಳುವ ತನ್ನ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT