ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಿಂದ ತೃತೀಯ ಲಿಂಗಿಗಳ ಮಕ್ಕಳ ಹಕ್ಕುಗಳ ಅಭಿಯಾನ

Last Updated 28 ಮಾರ್ಚ್ 2022, 19:16 IST
ಅಕ್ಷರ ಗಾತ್ರ

ನವದೆಹಲಿ: ಮಾರ್ಚ್‌ 31 ರಂದು ನಡೆಯುವ ತೃತೀಯ ಲಿಂಗಿಗಳ ಅಂತರರಾಷ್ಟ್ರೀಯ ದಿನದ ಅಂಗವಾಗಿ ವಿಶ್ವಸಂಸ್ಥೆಯು ಎಚ್‌ಐವಿ ಏಡ್ಸ್‌ ಕುರಿತ ಕಾರ್ಯಕ್ರಮದ ಅಡಿಯಲ್ಲಿ ತೃತೀಯ ಲಿಂಗಿಗಳ ಮಕ್ಕಳ ಹಕ್ಕುಗಳ ಅಭಿಯಾನವನ್ನು ಮೊದಲ ಬಾರಿಗೆ ಪ್ರಾರಂಭಿಸಿದೆ.

ಸೋಮವಾರ ಬಿಡುಗಡೆಯಾದ ‘ಅನ್‌ಬಾಕ್ಸ್ ಮಿ’ ಎಂಬ ಎರಡು ನಿಮಿಷ 10 ಸೆಕೆಂಡ್‌ಗಳ ಚಲನಚಿತ್ರದೊಂದಿಗೆ ಅಭಿಯಾನ ಆರಂಭಿಸಿದೆ.

ವಿಶ್ವದಾದ್ಯಂತ ಮಾರ್ಚ್ 31 ರಂದು ತೃತೀಯ ಲಿಂಗಿಗಳ ದಿನವನ್ನು ಆಚರಿಸುವ ಮೂಲಕ ಈ ಸಮುದಾಯ ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳ ಬಗೆಗಿನ ಗೋಪ್ಯತೆಯ ವಿಷಯಗಳ ಮಾಹಿತಿಯನ್ನು, ಅವರ ಕನಸುಗಳು ಮತ್ತು ಅವರು ಇಷ್ಟಪಡುವ ವಿಷಯಗಳ ಮಾಹಿತಿಯನ್ನು ಅಭಿಯಾನದಲ್ಲಿ ಒದಗಿಸಲಾಗುತ್ತದೆ.

ಭಾರತದಲ್ಲಿ ಶೇ 31ರಷ್ಟು ತೃತೀಯ ಲಿಂಗಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರಲ್ಲಿ ಶೇ 50ರಷ್ಟು ಮಂದಿ ತಮ್ಮ 20ನೇ ಹುಟ್ಟುಹಬ್ಬದ ಮೊದಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಇಂಡಿಯನ್ ಜರ್ನಲ್ ಫಾರ್ ಸೈಕಲಾಜಿಕಲ್ ಮೆಡಿಸಿನ್ ನಡೆಸಿದ ಅಧ್ಯಯನದ ವರದಿ ಹೇಳಿದೆ.

ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಂದೇಶವನ್ನು ನೀಡಲು ಮತ್ತು ಜಾಗೃತಿ ಮೂಡಿಸಲು ಭಾರತದಲ್ಲಿ ಶಾಲೆಗಳಲ್ಲಿ ಅಭಿಯಾನ ನಡೆಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT