ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2031ಕ್ಕೆ ಭಾರತದ ಜಿಡಿಪಿ ದುಪ್ಪಟ್ಟು

Published 3 ಆಗಸ್ಟ್ 2023, 15:48 IST
Last Updated 3 ಆಗಸ್ಟ್ 2023, 15:48 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಅರ್ಥವ್ಯವಸ್ಥೆಯ ವಾರ್ಷಿಕ ಬೆಳವಣಿಗೆ ಪ್ರಮಾಣವು ಶೇಕಡ 6.7ರಷ್ಟು ಇದ್ದರೆ, ಜಿಡಿಪಿ ಗಾತ್ರವು 2031ರ ವೇಳೆಗೆ ಈಗಿನ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚಾಗಬಲ್ಲದು ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಸಂಸ್ಥೆಯ ವರದಿಯೊಂದು ಹೇಳಿದೆ.

ದೇಶದ ಜಿಡಿಪಿ ಈಗ 3.4 ಟ್ರಿಲಿಯನ್ ಡಾಲರ್‌ (ಅಂದಾಜು ₹281 ಲಕ್ಷ ಕೋಟಿ). ವಾರ್ಷಿಕ ಆರ್ಥಿಕ ಬೆಳವಣಿಗೆ ದರವು ಶೇ 6.7ರಷ್ಟು ಇದ್ದಲ್ಲಿ, 2031ರ ವೇಳೆಗೆ ದೇಶದ ಜಿಡಿಪಿ ಗಾತ್ರವು 6.7 ಟ್ರಿಲಿಯನ್ ಡಾಲರ್ (554 ಲಕ್ಷ ಕೋಟಿ) ಆಗಲಿದೆ ಎಂದು ವರದಿಯು ಅಂದಾಜು ಮಾಡಿದೆ.

2022–23ನೆಯ ಸಾಲಿನಲ್ಲಿ ದೇಶದ ಜಿಡಿ‍ಪಿ ಬೆಳವಣಿಗೆ ದರವು ಶೇ 7.2ರಷ್ಟು ಆಗಿದೆ. ಜಾಗತಿಕ ಆರ್ಥಿಕ ಬೆಳವಣಿಗೆ ಕುಸಿಯವುದು ಹಾಗೂ ರೆಪೊ ದರ ಹೆಚ್ಚಳದ ಪರಿಣಾಮದಿಂದಾಗಿ ದೇಶದ ಜಿಡಿಪಿ ಬೆಳವಣಿಗೆಯು ಈ ವರ್ಷ ಶೇ 6ಕ್ಕೆ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT