ನವದೆಹಲಿ: ಜನವರಿಯಲ್ಲಿ ದೇಶದ ರಫ್ತು ಮೊತ್ತವು ₹3.32 ಲಕ್ಷ ಕೋಟಿಗೆ (36.56 ಬಿಲಿಯನ್ ಡಾಲರ್) ತಲುಪಿದೆ. ವ್ಯಾಪಾರ ಕೊರತೆಯು ಮೂರು ತಿಂಗಳ ಗರಿಷ್ಠ ಮಟ್ಟವಾದ ₹3.15 ಲಕ್ಷ ಕೋಟಿಗೆ (34.68 ಬಿಲಿಯನ್ ಡಾಲರ್) ತಲುಪಿದೆ.

ಜನವರಿಯಲ್ಲಿ ಆಮದು ಪ್ರಮಾಣವು ಶೇ 19.2ರಷ್ಟು ಹೆಚ್ಚಾಗಿದ್ದು ₹6.47 ಲಕ್ಷ ಕೋಟಿಗೆ (71.24 ಬಿಲಿಯನ್ ಡಾಲರ್) ತಲುಪಿದೆ. ಇದು ಈ ಹಣಕಾಸು ವರ್ಷದಲ್ಲಿ ತಿಂಗಳೊಂದರ ಅತಿಹೆಚ್ಚಿನ ಆಮದು. ಚಿನ್ನ ಹಾಗೂ ಬೆಳ್ಳಿಯ ಆಮದು ಹೆಚ್ಚಾಗಿದ್ದುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಚಿನ್ನ ಆಮದು ಶೇ 349.22ರಷ್ಟು ಜಾಸ್ತಿ ಆಗಿದೆ. ಬೆಳ್ಳಿಯ ಆಮದು ಶೇ 127ರಷ್ಟು ಹೆಚ್ಚಾಗಿದೆ.

ದೇಶದ ಸರಕು ಮತ್ತು ಸೇವಾ ರಫ್ತು ವಹಿವಾಟು ಕೂಡ ಹೆಚ್ಚಳ ಆಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸೇವೆಗಳು ಹಾಗೂ ಸರಕುಗಳ ರಫ್ತು ಮೌಲ್ಯವು ₹78 ಲಕ್ಷ ಕೋಟಿ ದಾಟುವ ಅಂದಾಜು ಇದೆ ಎಂದು ಅವರು ತಿಳಿಸಿದ್ದಾರೆ.

ಪೆಟ್ರೋಲಿಯಂ, ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಕಬ್ಬಿಣದ ಅದಿರು, ಕಾಫಿ ರಫ್ತು ಜನವರಿಯಲ್ಲಿ ಹೆಚ್ಚಾಗಿದೆ. ಆದರೆ ಚಹಾ, ಅಕ್ಕಿ, ಸಂಬಾರ ಪದಾರ್ಥಗಳು, ಚರ್ಮದ ಉತ್ಪನ್ನಗಳು, ಹರಳು ಮತ್ತು ಆಭರಣಗಳು, ರಾಸಾಯನಿಕಗಳು, ಸಿದ್ಧ ಉಡುಪುಗಳು, ಪ್ಲಾಸ್ಟಿಕ್ ರಫ್ತು ಕಡಿಮೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.