ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಫಸ್ಟ್‌ ಲೈಫ್‌ ಇನ್ಶುರೆನ್ಸ್‌

Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಹತ್ತು ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿರುವ ಇಂಡಿಯಾ ಫಸ್ಟ್‌ಲೈಫ್‌ ಇನ್ಶುರೆನ್ಸ್‌ ಕಂಪನಿಯು, ಜೀವ ವಿಮೆ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ವಿಮೆ ಉತ್ಪನ್ನಗಳಿಂದ ಅಲ್ಪಾವಧಿಯಲ್ಲಿ ಗಣನೀಯ ಸಾಧನೆ ಮಾಡಿದೆ.

ಬ್ಯಾಂಕ್‌ ಆಫ್‌ ಬರೋಡಾ, ಆಂಧ್ರ ಬ್ಯಾಂಕ್‌ ಮತ್ತು ಕಾರ್ಮೆಲ್‌ ಪಾಯಿಂಟ್‌ ಇನ್‌ವೆಸ್ಟಮೆಂಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಪ್ರವರ್ತಕ ಕಂಪನಿಗಳಾಗಿರುವ ಇಂಡಿಯಾ ಫಸ್ಟ್‌ಲೈಫ್‌ ಇನ್ಶುರೆನ್ಸ್‌ ಕಂಪನಿಯು ಜೀವ ವಿಮೆ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ವಿಮೆ ಉತ್ಪನ್ನಗಳಿಂದ ಅಲ್ಪಾವಧಿಯಲ್ಲಿ ಗಣನೀಯ ಸಾಧನೆ ಮಾಡಿದೆ. ವಿಶೇಷ ಉತ್ಪನ್ನಗಳನ್ನು ಪರಿಚಯಿಸಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಜೀವ ವಿಮೆ ಸೌಲಭ್ಯ ವಿಸ್ತರಿಸಲು ಕಾರ್ಯಪ್ರವೃತ್ತವಾಗಿದೆ.

’ಖಾಸಗಿ ಜೀವ ವಿಮೆ ಕಂಪನಿಗಳ ಸಾಲಿನಲ್ಲಿ ಅಸ್ತಿತ್ವಕ್ಕೆ ಅಲ್ಪಾವಧಿಯಲ್ಲಿ (10 ವರ್ಷಗಳಲ್ಲಿ) ಗಣನೀಯ ಸಾಧನೆ ಮಾಡಿರುವುದಕ್ಕೆ ನಮಗೆ ಹೆಮ್ಮೆ ಇದೆ‘ ಎಂದು ಸಿಇಒ ಆರ್‌. ಎಂ. ವಿಶಾಖಾ ಹೇಳುತ್ತಾರೆ. ಜೀವ ವಿಮೆ ಕಂಪನಿಗಳ ಸಿಇಒ ಹುದ್ದೆಗೆ ಏರಿದ ದೇಶದ ಮೊದಲ ಮಹಿಳೆ ಇವರಾಗಿದ್ದಾರೆ.

‘ಬಡವರು, ಶ್ರೀಮಂತರು ಎನ್ನದೇ ಎಲ್ಲ ಬಗೆಯ ಆದಾಯದ ಗ್ರಾಹಕರ ಅಗತ್ಯಗಳನ್ನು ಪೂರೈಸುವ ವಿಮೆ ಉತ್ಪನ್ನಗಳು ನಮ್ಮ ಬಳಿ ಇವೆ. ಭಾರಿ ಆಸ್ತಿ–ಪಾಸ್ತಿ ಹೊಂದಿದ ಶ್ರೀಮಂತರಿಂದ ಹಿಡಿದು ಬಡವರಿಗಾಗಿ ವಾರ್ಷಿಕ ₹ 2 ಲಕ್ಷದಿಂದ ಕನಿಷ್ಠ ₹ 500 ಕಂತು ಪಾವತಿಸುವ ವಿಮೆ ಉತ್ಪನ್ನಗಳು ನಾವು ಪರಿಚಯಿಸಿದ್ದೇವೆ.

’ಜೀವ ವಿಮೆ ಕ್ಷೇತ್ರದಲ್ಲಿ ಕಾಗದರಹಿತ (ಡಿಜಿಟಲ್‌) ಸೇವೆ ಆರಂಭಿಸಿದ ಮೊದಲ ಕಂಪನಿಯೂ ನಮ್ಮದಾಗಿದೆ. ಜೀವ ವಿಮೆಯ ಎಲ್ಲ ಬಗೆಯ ವಹಿವಾಟು ಇಲ್ಲಿ ಡಿಜಿಟಲ್‌ ರೂಪದಲ್ಲಿ ಇರಲಿದೆ. ಗ್ರಾಹಕರು ತಾವು ಖರೀದಿಸಿದ ವಿಮೆ ಉತ್ಪನ್ನಗಳ ದಾಖಲೆಗಳ ಮುದ್ರಣ ಪ್ರತಿ ಜತೆಗೆ ಡಿಜಿಟಲ್‌ ರೂಪದಲ್ಲಿಯೂ ಇಟ್ಟುಕೊಳ್ಳಬಹುದು.

‘ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳ್ಳುವ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ. ಇದರಿಂದ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ಜೀವ ವಿಮೆ ವಹಿವಾಟನ್ನು ವ್ಯಾಪಕವಾಗಿ ವಿಸ್ತರಿಸಲು ಸಾಧ್ಯವಾಗಲಿದೆ.

‘ದಕ್ಷಿಣ ಭಾರತದ ಜನರು ನಿರ್ದಿಷ್ಟ ಮೊತ್ತದ ಲಾಭ ಖಾತರಿ ಯೋಜನೆಗಳಲ್ಲಿ ಹಣ ತೊಡಗಿಸಲು ಒಲವು ಹೊಂದಿದ್ದಾರೆ. ಅವರ ಅಗತ್ಯಗಳಿಗೆ ಅನುಗುಣವಾಗಿಯೇ ಜೀವ ವಿಮೆ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಖಚಿತ ಲಾಭಕ್ಕೆ ಗಮನ ನೀಡುವ ಗ್ರಾಹಕರಿಗೆಂದೇ ಸ್ಮಾರ್ಟ್‌ ಪೇ (Smart Pay) ಉತ್ಪನ್ನ ಮತ್ತು ಕಡಿಮೆ ಆದಾಯದ ಜನರಿಗಾಗಿ ಸರಳ, ಕಡಿಮೆ ಬೆಲೆಯ ಮತ್ತು ಸುರಕ್ಷಿತ ಕಿರು ವಿಮೆ ಯೋಜನೆಯಾದ (micro insurance products) ‘ಮೈಕ್ರೊ ಬಚತ್‌‘ ಉತ್ಪನ್ನ ಪರಿಚಯಿಸಲಾಗಿದೆ.

‘ಮೈಕ್ರೊ ಇನ್ಶುರೆನ್ಸ್‌ ಉತ್ಪನ್ನಗಳನ್ನು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ) ಶಾಖೆಗಳ ಮೂಲಕ ಹಳ್ಳಿ ಹಳ್ಳಿಗಳಿಗೂ ವಿತರಿಸಲಾಗುತ್ತಿದೆ. ಕಡಿಮೆ ಮೊತ್ತದ ಉಳಿತಾಯಕ್ಕೆ ಆದ್ಯತೆ ನೀಡುವ ವಿಶೇಷವಾಗಿ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಇದು ಹೆಚ್ಚು ಪ್ರಯೋಜನಕಾರಿ ಆಗಿರಲಿದೆ.

‘ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿರುವ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಹುತೇಕ ವಿಮೆ ಕಂಪನಿಗಳು ಹೊಸ ಗ್ರಾಹಕರಿಗೆ ಅನ್ವಯಿಸುತ್ತಿವೆ. ನಾವು ಮಾತ್ರ ಹಳೆಯ ಗ್ರಾಹಕರಿಗೂ ಈ ಸೌಲಭ್ಯ ವಿಸ್ತರಿಸಿದ್ದೇವೆ. ವಿಮೆ ವಹಿವಾಟು ದೇಶಿ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಕಾರಣಕ್ಕೆ ವಿಮೆ ಪಾಲಿಸಿ ಖರೀದಿಸಲು ಸರ್ಕಾರ ಉತ್ತೇಜನ ನೀಡಬೇಕಾಗುತ್ತದೆ.

‘ಜನರ ಜೀವನ ಶೈಲಿಯು ಈಗ 10 ವರ್ಷಗಳ ಹಿಂದಿನಕ್ಕಿಂತ ತುಂಬ ಭಿನ್ನವಾಗಿದೆ. ಯುವ ಸಮುದಾಯದಲ್ಲಿ ವಿಮೆ ಜನಪ್ರಿಯಗೊಳಿಸಲೂ ಕಂಪನಿಯು ಕ್ರಮ ಕೈಗೊಂಡಿದೆ. ಅದಕ್ಕೆ ತಕ್ಕಂತೆ ಕಂಪನಿಯು ಪ್ರತಿಯೊಬ್ಬ ಗ್ರಾಹಕರನ್ನು ವಿಶಿಷ್ವವಾಗಿ ಪರಿಗಣಿಸಿ ಅವರ ಅಗತ್ಯಗಳಿಗೆ ತಕ್ಕಂತೆ ವಿಮೆ ಉತ್ಪನ್ನ ಪರಿಚಯಿಸಿದೆ. ಅದರಲ್ಲಿ ’ಸ್ಮಾರ್ಟ್‌ ಪೇ‘ (Smart Pay) ಕೂಡ ಒಂದಾಗಿದೆ.

’ಸ್ಮಾರ್ಟ್‌‘ ಗ್ರಾಹಕರ ಅಗತ್ಯ ಪೂರೈಸಲು ‘ಸ್ಮಾರ್ಟ್‌ ಪೇ’ ಪರಿಚಯಿಸಲಾಗಿದೆ. ಅಲ್ಪಾವಧಿವರೆಗೆ ಕಂತು ಪಾವತಿಸಿ ದೀರ್ಘಾವಧಿ ವಿಮೆ ಸೌಲಭ್ಯ ಪಡೆಯುವುದು ಇದರ ವೈಶಿಷ್ಟ್ಯವಾಗಿದೆ. ಹಣಕಾಸು ಸಂಕಷ್ಟದ ಕಾರಣಕ್ಕೆ ಒಂದು ವರ್ಷ ಕಂತು ಪಾವತಿಸದಿದ್ದರೂ ಜೀವ ವಿಮೆ ಪಾಲಿಸಿ ಮುಂದುವರೆದಿರುತ್ತದೆ. ಎಲ್ಲ ಸಂದರ್ಭಗಳಲ್ಲಿ ಹಣಕಾಸು ಸೌಲಭ್ಯದ ಖಾತರಿ ಇದರ ವಿಶೇಷತೆಯಾಗಿದೆ‘ ಎಂದು ವಿಶಾಖಾ ಅವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT