ಮುಂಬೈ: ‘ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟು ದಾಖಲಾಗಿದೆ.

ಭಾರತದ ಆರ್ಥಿಕತೆ ಬೆಳವಣಿಗೆಯ ವೇಗ ಹೆಚ್ಚಾಗಿರುವುದು, ಗ್ರಾಹಕರ ಖರೀದಿ ಭರಾಟೆಯು ಇದಕ್ಕೆ ಕಾರಣವಾಗಿವೆ’ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಶುಕ್ರವಾರ ಬಿಡು ಗಡೆಗೊಳಿಸಿದ ದತ್ತಾಂಶದಲ್ಲಿ ತಿಳಿಸಿದೆ.

ಶೇ 7.6ರಷ್ಟು ನಿರೀಕ್ಷೆ:

ಪ್ರಸಕ್ತ ಪೂರ್ಣ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 7.6ಕ್ಕೆ ಏರಿಕೆ ಮಾಡಲಾಗಿದೆ.

ಜಾಗತಿಕ ವ್ಯಾಪಾರದ ಅಡೆತಡೆಯ ನಡುವೆಯೂ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ದೇಶದ ಆರ್ಥಿಕತೆ ಚೇತರಿಸಿಕೊಂಡ ಕಾರಣ ಜಿಡಿಪಿ ಲೆಕ್ಕಾಚಾರದ ಪರಿಷ್ಕರಣೆ
ನಿರ್ಧರಿಸಲಾಗಿದೆ.

ಹಳೆಯ ದತ್ತಾಂಶ ಸರಣಿಯ ಪ್ರಕಾರ, ಶೇ 7.1ರಷ್ಟು ಜಿಡಿಪಿ ಏರಿಕೆಯನ್ನು ನಿರೀಕ್ಷಿ ಸಲಾಗಿತ್ತು. 2024–25ರ ವಿತ್ತೀಯ ದತ್ತಾಂಶದ ಪ್ರಕಾರ ಏರಿಕೆಯು ಶೇ 7.1ರಷ್ಟಿತ್ತು.

ಲೆಕ್ಕಾಚಾರದ ಪರಿಷ್ಕರಣೆಯ ಪ್ರಕಾರ, ಮೂಲ ವರ್ಷವನ್ನು 2022–23ಕ್ಕೆ ಬದಲಾಯಿಸ ಲಾಗಿದ್ದು, ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಸುಧಾರಿತ ಅಂಶಗಳ ಪರಿಗಣನೆಯನ್ನು ಒಳಗೊಂಡಿದೆ. ಆದಾಗ್ಯೂ, ಅಕ್ಟೋಬರ್– ಡಿಸೆಂಬರ್ನಲ್ಲಿ ಜಿಡಿಪಿ ಬೆಳವಣಿಗೆಯು ಮಧ್ಯಮ ಇಳಿಕೆಗೆ ಕಾರಣವಾಯಿತು. ಇದು ಸೆಪ್ಟೆಂಬರ್ತ್ರೈಮಾಸಿಕದಲ್ಲಿ ಶೇ 8.4ರಷ್ಟಿತ್ತು. ಅದು ಈಗ ಶೇ 7.8ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.