ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಬಂಡವಾಳ ಸೂಚ್ಯಂಕ: ದೇಶಕ್ಕೆ 116ನೇ ಸ್ಥಾನ

Last Updated 17 ಸೆಪ್ಟೆಂಬರ್ 2020, 17:14 IST
ಅಕ್ಷರ ಗಾತ್ರ

ವಾಷಿಂಗ್ಟನ್: ವಿಶ್ವಬ್ಯಾಂಕ್ ಸಿದ್ಧಪಡಿಸಿದ ‘ಮಾನವ ಬಂಡವಾಳ ಸೂಚ್ಯಂಕ’ದಲ್ಲಿ ಭಾರತ 116ನೇ ಸ್ಥಾನದಲ್ಲಿದೆ. ಆದರೆ 2018ನೇ ಸಾಲಿನಲ್ಲಿ 0.44 ಅಂಕ ಪಡೆದಿದ್ದ ಭಾರತವು 2020ರ ಸೂಚ್ಯಂಕದಲ್ಲಿ 0.49 ಅಂಕಗಳನ್ನು ಪಡೆದಿದೆ.

ಈ ಬಾರಿಯ ಮಾನವ ಬಂಡವಾಳ ಸೂಚ್ಯಂಕವು ಒಟ್ಟು 174 ದೇಶಗಳ ಮಾರ್ಚ್‌ 2020ರವರೆಗಿನ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಕೋವಿಡ್–19 ಸಾಂಕ್ರಾಮಿಕ ಹರಡುವುದಕ್ಕೂ ಮೊದಲು ಬಹುತೇಕ ದೇಶಗಳು ಮಕ್ಕಳಲ್ಲಿ ‘ಮಾನವ ಬಂಡವಾಳ’ವನ್ನು ಹೆಚ್ಚಿಸುವಲ್ಲಿ ಸ್ಥಿರ ಪ್ರಗತಿಯನ್ನು ಸಾಧಿಸಿದ್ದವು ಎಂಬುದನ್ನು ಈ ಸೂಚ್ಯಂಕವು ತೋರಿಸಿದೆ.

ಪ್ರಜೆಗಳ ಆರ್ಥಿಕ ಮತ್ತು ವೃತ್ತಿ ಸಾಮರ್ಥ್ಯವನ್ನು ಯಾವ ದೇಶ ಎಷ್ಟು ಚೆನ್ನಾಗಿ ಬಳಕೆ ಮಾಡಿಕೊಳ್ಳಬಲ್ಲದು ಎಂಬುದನ್ನು ಕೂಡ ಪರಿಗಣಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗುತ್ತದೆ. ‘ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಮಾನವ ಬಂಡವಾಳವನ್ನು ಬೆಳೆಸಲು, ಆರೋಗ್ಯ ರಕ್ಷಣೆ, ಶಾಲೆಗಳಿಗೆ ದಾಖಲಾತಿ ಹೆಚ್ಚಳಕ್ಕೆ ದಶಕದಿಂದ ನಡೆಸಿದ ಪ್ರಯತ್ನಗಳು ವ್ಯರ್ಥವಾಗುವ ಅಪಾಯ ಇದೆ. ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳು ಮಹಿಳೆಯರು ಹಾಗೂ ದುರ್ಬಲ ಕುಟುಂಬಗಳ ಮೇಲೆ ಹೆಚ್ಚಿದೆ’ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಹಿಂದಿನ ವರ್ಷ ಭಾರತವು ಈ ಸೂಚ್ಯಂಕದ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಎತ್ತಿತ್ತು. ಆಗ ಭಾರತಕ್ಕೆ 115ನೇ ಸ್ಥಾನ ಲಭಿಸಿತ್ತು. ಈ ವಿಚಾರವಾಗಿ ಪ್ರಶ್ನಿಸಿದಾಗ, ವಿಶ್ವ ಬ್ಯಾಂಕ್‌ನ ಮಾನವ ಅಭಿವೃದ್ಧಿ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞ ರಾಬರ್ಟಾ ಗಟ್ಟಿ ಅವರು, ‘ಸೂಚ್ಯಂಕವನ್ನು ಉತ್ತಮಪಡಿಸಲು ಬೇರೆ ಬೇರೆ ದೇಶಗಳ ಜೊತೆ ಕೆಲಸ ಮಾಡಲಾಗಿದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT