ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ಶೇ 4ಕ್ಕೆ ತಗ್ಗಿಸಬೇಕಿದೆ: ರಿಸರ್ವ್‌ ಬ್ಯಾಂಕ್

Published 18 ಜನವರಿ 2024, 16:26 IST
Last Updated 18 ಜನವರಿ 2024, 16:26 IST
ಅಕ್ಷರ ಗಾತ್ರ

ಮುಂಬೈ : ಮುಂಬರುವ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 4ರಲ್ಲಿ ಕಾಯ್ದುಕೊಳ್ಳುವ ಮೂಲಕ ಬೆಲೆಯಲ್ಲಿ ಸ್ಥಿರತೆ ಕಾಪಾಡಬೇಕಿದೆ. ಆ ಮೂಲಕ 2024–25ನೇ ಹಣಕಾಸು ವರ್ಷದಲ್ಲಿ ಕನಿಷ್ಠ ಶೇ 7ರಷ್ಟು ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಸಾಧಿಸುವ ಗುರಿ ಭಾರತದ ಮುಂದಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ಹೇಳಿದೆ.

ಸದ್ಯ ಜಾಗತಿಕ ಆರ್ಥಿಕತೆಯು ಭಿನ್ನ ದಿಕ್ಕಿನತ್ತ ಸಾಗಿದೆ. ಈ ನಡುವೆಯೇ ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಆರ್ಥಿಕತೆಗಳು ವಿಶ್ವದ ಇತರೆ ರಾಷ್ಟ್ರಗಳ ಆರ್ಥಿಕತೆಯ ಬೆಳವಣಿಗೆಯನ್ನು ಮೀರಿಸಲು ಸಿದ್ಧವಾಗಿವೆ ಎಂದು ಗುರುವಾರ ಬಿಡುಗಡೆ ಮಾಡಿರುವ ಆರ್‌ಬಿಐನ ಆರ್ಥಿಕ ಪರಿಶೀಲನಾ ವರದಿಯು ಪ್ರತಿಪಾದಿಸಿದೆ. 

2024–25ನೇ ಹಣಕಾಸು ವರ್ಷದಲ್ಲಿ ಜಿಡಿಪಿ ದರವು ಶೇ 7ರಷ್ಟು ಪ್ರಗತಿ ಕಾಣಲು ಹಣದುಬ್ಬರ, ಬಡ್ಡಿದರ, ವಿದೇಶಿ ವಿನಿಮಯ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ವೇಳೆಗೆ ಹಣದುಬ್ಬರವು ತಗ್ಗಬೇಕಿದೆ. ಆಗಷ್ಟು ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT