ಮುಂಬೈ: ‘2035ರ ವೇಳೆಗೆ ದೇಶದ ರಿಟೇಲ್ ಮಾರುಕಟ್ಟೆಯ ಗಾತ್ರವು ಗರಿಷ್ಠ ₹215 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದೆ’ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಮತ್ತು ಭಾರತೀಯ ರಿಟೇಲ್ ವ್ಯಾಪಾರಿಗಳ ಸಂಘ (ಆರ್ಎಐ) ಸಿದ್ಧಪಡಿಸಿದ ಜಂಟಿ ವರದಿ ತಿಳಿಸಿದೆ.

ಈಗ ದೇಶದ ರಿಟೇಲ್ ಮಾರುಕಟ್ಟೆಯ ಗಾತ್ರ ₹90 ಲಕ್ಷ ಕೋಟಿಯಿಂದ ₹95 ಲಕ್ಷ ಕೋಟಿಯಷ್ಟು ಇದೆ ಎಂದು ರಿಟೇಲ್ ನಾಯಕತ್ವ ಶೃಂಗದಲ್ಲಿ ಬಿಡುಗಡೆ ಆಗಿರುವ ವರದಿಯು ಹೇಳಿದೆ.

ದೇಶವು ಜಗತ್ತಿನ ಪ್ರಮುಖ ಆರ್ಥಿಕತೆಗಳನ್ನು ಮೀರಿಸುತ್ತಿದ್ದು, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಶಿಸ್ತುಬದ್ಧ ಕಾರ್ಯಾಚರಣೆ ಮತ್ತು ಎ.ಐ ಆಧರಿತ ಪರಿವರ್ತನೆಯನ್ನು ಅಳವಡಿಸಿಕೊಳ್ಳುವವರಿಗೆ ಯಶಸ್ಸು ದಕ್ಕುತ್ತದೆ ಎಂದು ತಿಳಿಸಿದೆ.

ಗ್ರಾಹಕರ ಜೊತೆಗಿನ ಸಂಬಂಧದಲ್ಲಿ, ಕಾರ್ಯಾಚರಣೆ ಮಾದರಿಗಳಲ್ಲಿ, ಪ್ರತಿಭೆಯನ್ನು ಬಳಸಿಕೊಳ್ಳುವಲ್ಲಿ ಆಗುವ ಬದಲಾವಣೆಗಳನ್ನು ಒಪ್ಪಿಕೊಳ್ಳುವ ರಿಟೇಲ್ ವ್ಯಾಪಾರಿಗಳು ಅಪಾರ ಪ್ರಮಾಣದ ಪ್ರಯೋಜನ ತಮ್ಮದಾಗಿಸಿಕೊಳ್ಳುತ್ತಾರೆ ಎಂದು ವರದಿಯು ವಿವರಿಸಿದೆ.

‘ಭಾರತದ ರಿಟೇಲ್ ಮಾರುಕಟ್ಟೆಯು ಬಹಳ ಸ್ಫೂರ್ತಿದಾಯಕವಾಗಿದೆ. ಮುಂದಿನ ದಶಕದ ಅವಧಿಯಲ್ಲಿ ದೇಶದ ರಿಟೇಲ್ ಮಾರುಕಟ್ಟೆ ವಲಯದ ಗಾತ್ರವು ₹200 ಲಕ್ಷ ಕೋಟಿಯಷ್ಟು ಆಗಲಿದೆ’ ಎಂದು ಬಿಸಿಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಪಾಲುದಾರ ಅಭೀಕ್ ಸಿಂಘಿ ಹೇಳಿದ್ದಾರೆ.

‘ಎ.ಐ ಆಧಾರಿತ ಆನ್ಲೈನ್ ಖರೀದಿಯು ಜಾತಿಕ ಮಟ್ಟದಲ್ಲಿ ಗ್ರಾಹಕರ ತೀರ್ಮಾನಗಳ ಮೇಲೆ ಈಗಾಗಲೇ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಡಿಜಿಟಲ್ ವೇದಿಕೆಗಳನ್ನು ಅಳವಡಿಸಿಕೊಳ್ಳುವುದು ವೇಗವಾಗಿರುವ ಹಿನ್ನೆಲೆಯಲ್ಲಿ, ಎಐ ಆಧಾರಿತ ಖರೀದಿಯು ಭಾರತದ ನಗರ ಪ್ರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಜೆನ್ ಝೀ ಗ್ರಾಹಕರಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಬಿಸಿಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪಾಲುದಾರ ಭರತ್ ಮಿಮಾನಿ ಹೇಳಿದ್ದಾರೆ.

ಗ್ರಾಹಕರ ಬೇಡಿಕೆಯಲ್ಲಿ ಬದಲಾವಣೆ ಆಗಿದೆ. ಗ್ರಾಹಕರು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ರಿಟೇಲ್ ವ್ಯಾಪಾರಿಗಳು ಹೊಸತನವನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಆರ್ಎಐ ಸಿಇಒ ಕುಮಾರ್ ರಾಜಗೋಪಾಲನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.