ರಕ್ಷಣಾ ವೆಚ್ಚಕ್ಕೆ ಶೇ 18ರಷ್ಟು ಹಣ ನಿಗದಿ
ದಾಖಲೆಗಳ ಪ್ರಕಾರ ಪಾಕಿಸ್ತಾನವು ತನ್ನ ವಾರ್ಷಿಕ ಬಜೆಟ್‌ನಲ್ಲಿ ರಕ್ಷಣಾ ಉದ್ದೇಶಕ್ಕೆ ಶೇ 18ರಷ್ಟು ಹಣವನ್ನು ಮೀಸಲಿಟ್ಟಿದೆ. ಜಾಗತಿಕ ಮಟ್ಟದಲ್ಲಿ ಸಂಘರ್ಷಪೀಡಿತ ದೇಶಗಳು ರಕ್ಷಣಾ ಉದ್ದೇಶಕ್ಕೆ ಬಜೆಟ್‌ನಲ್ಲಿ ಶೇ 10ರಿಂದ ಶೇ 14ರಷ್ಟು ಅನುದಾನ ಮೀಸಲಿಟ್ಟಿವೆ ಎಂದು ಮೂಲಗಳು ಹೇಳಿವೆ. 1980ರಿಂದ 2023ರ ನಡುವೆ ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದು ಪ್ರಮಾಣದಲ್ಲಿ ಸರಾಸರಿ ಶೇ 20ರಷ್ಟು ಹೆಚ್ಚಳವಾಗಿದೆ. ಐಎಂಎಫ್‌ನಿಂದ ನೆರವು ಪಡೆಯದಿರುವ ವರ್ಷಗಳಿಗೆ ಹೋಲಿಸಿದರೆ, ನೆರವು ಪಡೆದ ವರ್ಷಗಳಲ್ಲಿ ಶಸ್ತ್ರಾಸ್ತ್ರ ಖರೀದಿ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿವೆ.