ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಯಾನ: ₹ 1.3 ಲಕ್ಷ ಕೋಟಿ ವರಮಾನ ನಷ್ಟ ಸಾಧ್ಯತೆ

Last Updated 15 ಜುಲೈ 2020, 13:41 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿಮಾನಯಾನ ಉದ್ಯಮವು ಮೂರು ಹಣಕಾಸು ವರ್ಷಗಳಲ್ಲಿ ₹ 1.1 ಲಕ್ಷ ಕೋಟಿಗಳಿಂದ ₹ 1.3 ಲಕ್ಷ ಕೋಟಿಯವರೆಗೆ ವರಮಾನದಲ್ಲಿ ನಷ್ಟ ಅನುಭವಿಸಲಿವೆ ಎಂದು ಕ್ರಿಸಿಲ್‌ ರಿಸರ್ಚ್‌ ಕಂಪನಿ ಹೇಳಿದೆ.

ಕೊರೊನಾದಿಂದಾಗಿ ವಿಧಿಸಿರುವ ಪ್ರಯಾಣ ನಿರ್ಬಂಧವು ಉದ್ಯಮದ ಮೇಲೆ ತೀವ್ರ ತರದ ಪರಿಣಾಮ ಬೀರಿದೆ. ಬೆಳವಣಿಗೆ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದರಿಂದ 2020ರಿಂದ 2022ರವರೆಗೆ ಆಗಲಿರುವ ವರಮಾನ ನಷ್ಟವನ್ನು ತುಂಬಿಕೊಳ್ಳುವುದು ಕಷ್ಟವಾಗಲಿದೆ ಎಂದೂ ಹೇಳಿದೆ.

2020–21ನೇ ಹಣಕಾಸು ವರ್ಷದಲ್ಲಿ ಕಚ್ಚಾತೈಲ ದರ ಬ್ಯಾರಲ್‌ಗೆ 38–42 ಡಾಲರ್‌ಗೆ ಇಳಿಕೆ ಆಗಲಿದೆ ಎಂದು ಊಹಿಸಿದರೆ, ಶೇ 30–45ರಷ್ಟು ವೆಚ್ಚವನ್ನು ಭರಿಸಿಕೊಳ್ಳಬಹುದೇ ವಿನಃ ಲಾಭಕ್ಕೆ ಮರಳಲು ಸಾಧ್ಯವಿಲ್ಲ. ಪ್ರಯಾಣಿಕ್ಕೆ ಇರುವ ನಿರ್ಬಂಧದಿಂದಾಗಿ ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಕೋವಿಡ್‌ ನಿಯಂತ್ರಣಕ್ಕೆ ಬರದೇ ಹೋದರೆ 2022ರಲ್ಲಿಯೂ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ಚೇತರಿಕೆ ಕಂಡುಬರುವುದಿಲ್ಲ.

ಲಾಕ್‌ಡೌನ್‌ ಪರಿಣಾಮ

40–45%: ದೇಶಿ ಪ್ರಯಾಣದಲ್ಲಿ ಆಗಲಿರುವ ಇಳಿಕೆ

60–65%: ವಿದೇಶಿ ಪ್ರಯಾಣದಲ್ಲಿ ಆಗಲಿರುವ ಇಳಿಕೆ

4–6%: ಅಂತರರಾಷ್ಟ್ರೀಯ ಪ್ರಯಾಣದ ದರದಲ್ಲಿ ಆಗಲಿರುವ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT