ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ ಪ್ರಕ್ರಿಯೆಯಿಂದ ಹಿಂದೆ ಸರಿದ ಜೋಯಾಲುಕ್ಕಾಸ್

Last Updated 21 ಫೆಬ್ರುವರಿ 2023, 13:36 IST
ಅಕ್ಷರ ಗಾತ್ರ

ಬೆಂಗಳೂರು (ರಾಯಿಟರ್ಸ್): ಚಿನ್ನಾಭರಣ ಮಾರಾಟ ವಲಯದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಜೋಯಾಲುಕ್ಕಾಸ್, ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಮೂಲಕ ಷೇರುಗಳನ್ನು ಮಾರಾಟ ಮಾಡುವ ಆಲೋಚನೆಯನ್ನು ಕೈಬಿಟ್ಟಿದೆ.

₹ 2,300 ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದ್ದ ಐಪಿಒ ಯೋಜನೆಯನ್ನು ಕೈಬಿಟ್ಟಿದ್ದಕ್ಕೆ ಜೋಯಾಲುಕ್ಕಾಸ್ ಕಂಪನಿಯು ಕಾರಣ ತಿಳಿಸಿಲ್ಲ. ಆದರೆ, ಷೇರು ಮಾರುಕಟ್ಟೆಯಲ್ಲಿನ ಅಸ್ಥಿರತೆ ಹಾಗೂ ಹಣದುಬ್ಬರ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಈ ವಿಚಾರವಾಗಿ ಜೋಯಾಲುಕ್ಕಾಸ್ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ಇ–ವಾಣಿಜ್ಯ ಕಂಪನಿಯಾದ ಸ್ನ್ಯಾಪ್‌ಡೀಲ್‌ ಐಪಿಒ ಮೂಲಕ ಬಂಡವಾಳ ಸಂಗ್ರಹಿಸುವ ಆಲೋಚನೆಯನ್ನು ಡಿಸೆಂಬರ್‌ನಲ್ಲಿ ಕೈಬಿಟ್ಟಿತ್ತು. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸುವ ಬೋಟ್ ಕಂಪನಿಯು ಐಪಿಒ ಮೂಲಕ ಬಂಡವಾಳ ಸಂಗ್ರಹಿಸುವ ಬದಲು ಹಾಲಿ ಹೂಡಿಕೆದಾರರಿಂದಲೇ ಹೆಚ್ಚಿನ ಬಂಡವಾಳ ಸಂಗ್ರಹಿಸಲು ತೀರ್ಮಾನಿಸಿತ್ತು.

ಜೋಯಾಲುಕ್ಕಾಸ್ ಕಂಪನಿಯು ಐಪಿಒ ಮೂಲಕ ಸಂಗ್ರಹವಾಗುವ ಮೊತ್ತದಲ್ಲಿ ಒಂದು ಪಾಲನ್ನು ಸಾಲ ತೀರಿಸಲು ಬಳಸಿಕೊಳ್ಳುವ ಆಲೋಚನೆ ಹೊಂದಿತ್ತು. ಕಂಪನಿಯು 68 ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT