ಇಂಡಿಯನ್‌ ಆಯಿಲ್‌ ಪ್ರಚಾರ ಅಭಿಯಾನ

ಗುರುವಾರ , ಜೂನ್ 20, 2019
24 °C

ಇಂಡಿಯನ್‌ ಆಯಿಲ್‌ ಪ್ರಚಾರ ಅಭಿಯಾನ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್‌ ಆಯಿಲ್‌ (ಐಒಸಿ) ಮಾರಾಟ ಅಭಿಯಾನ ಆರಂಭಿಸಿದೆ.

ಜೂನ್ 1ರಿಂದ ಜುಲೈ 15ರವರೆಗೆ ದೇಶದಾದ್ಯಂತ ಈ ಪ್ರಚಾರ ಆಂದೋಲನ ನಡೆಯಲಿದೆ. ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲೇ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಬಳಸಿಕೊಳ್ಳಲಾಗುತ್ತಿದೆ. ₹ 300ಕ್ಕೂ ಹೆಚ್ಚಿನ ಮೊತ್ತದ ಇಂಧನ ಖರೀದಿಸುವ  ಬೈಕ್‌ ಹಾಗೂ ₹ 1,000 ಹೆಚ್ಚಿನ ಮೊತ್ತದ ಇಂಧನ ಖರೀದಿಸುವ ನಾಲ್ಕು ಚಕ್ರದ ವಾಹನದ ಪ್ರತಿಯೊಬ್ಬ ಗ್ರಾಹಕರು ಲಾಟರಿ ಬಹುಮಾನ ಗೆಲ್ಲಲು ಅರ್ಹರಾಗುತ್ತಾರೆ.  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಗ್ರಾಹಕರು 77105 40400 ಸಂಖ್ಯೆಗೆ <Dealer Code> <Space> <Bill number> <Space> <Bill amount> ನಮೂದಿಸಿ ಎಸ್ಎಂಎಸ್ ಕಳುಹಿಸಬೇಕು.

ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲೂ ಮಾರಾಟಗಾರರ (ಡೀಲರ್) ಕೋಡ್ ಲಭ್ಯವಿರುತ್ತದೆ. ಪ್ರತಿ 15 ದಿನಕ್ಕೊಮ್ಮೆ ಲಾಟರಿ ನಡೆಸಲಾಗುವುದು. ಇಂಧನದ ವೋಚರ್,  ಕ್ರಿಕೆಟ್ ಬ್ಯಾಟ್ ಮತ್ತು ಸ್ಮಾರ್ಟ್‌ಫೋನ್ ಗೆಲ್ಲಬಹುದಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಬಂಪರ್ ಬಹುಮಾನ ರೂಪದಲ್ಲಿ 4 ಬೈಕ್ ಮತ್ತು ಒಂದು ಕಾರ್‌ ಗೆಲ್ಲುವ ಅವಕಾಶ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !