ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಲ್ಲಿ ಕೆಟ್ಟ ನಿರ್ವಹಣೆ ತೋರಿದ ರೂಪಾಯಿ

Last Updated 24 ಡಿಸೆಂಬರ್ 2020, 6:25 IST
ಅಕ್ಷರ ಗಾತ್ರ

ಬೆಂಗಳೂರು: 2020ನೇ ಸಾಲಿನಲ್ಲಿ ಭಾರತೀಯ ರೂಪಾಯಿ ಏಷ್ಯಾ ಖಂಡದಲ್ಲಿ ಕೆಟ್ಟದಾಗಿ ನಿರ್ವಹಣೆ ತೋರಿರುವ ಕರೆನ್ಸಿಗಳ ಸಾಲಿನಲ್ಲಿ ಒಂದೆನಿಸುವ ಮೂಲಕ ಅಪಖ್ಯಾತಿಗೊಳಗಾಗಿದೆ.

ದುರ್ಬಲ ಡಾಲರ್ ಹಾಗೂ ವಿದೇಶಿ ನಿಧಿಯ ಒಳಹರಿವಿನ ಲಾಭವನ್ನು ಪಡೆಯುವಲ್ಲಿ ಭಾರತೀಯ ರೂಪಾಯಿ ವಿಫಲಗೊಂಡಿದೆ.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಶೇಕಡಾ 3.28ರಷ್ಟು ಕುಸಿತ ಕಂಡಿದೆ.

ಭಾರತೀಯ ರೂಪಾಯಿಗೆ ಹೋಲಿಸಿದಾಗ ಅತ್ಯಂತ ಕೆಟ್ಟ ನಿರ್ವಹಣೆ ತೋರಿರುವ ಏಕೈಕ ಕರೆನ್ಸಿ ಪಾಕಿಸ್ತಾನದ ರೂಪಾಯಿ ಆಗಿದೆ. ಬಾಹ್ಯ ಸಾಲದ ಹೊರೆ ಅನುಭವಿಸುತ್ತಿರುವ ಪಾಕಿಸ್ತಾನದ ಕರೆನ್ಸಿ ಶೇಕಡಾ 3.53ರಷ್ಟು ಕುಸಿದಿತ್ತು.

ಏಷ್ಯಾದ ಇತರ ಕರೆನ್ಸಿಗಳಿಗೆ ಹೋಲಿಸಿದರೆ, ದೇಶದ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗರಿಷ್ಠ ಮಟ್ಟಿಗೆ ನಿಬಂಧನೆಗಳನ್ನು ಹೇರಿದ್ದರಿಂದಾಗಿ, ದುರ್ಬಲ ಅಮೆರಿಕನ್ ಡಾಲರ್ ಹಾಗೂ ವಿದೇಶಿ ನಿಧಿ ಒಳಹರಿವಿನ ಪ್ರಯೋಜನ ಪಡೆಯುವಲ್ಲಿ ಭಾರತೀಯ ರೂಪಾಯಿ ವಿಫಲವಾಗಿದೆ.

ಭಾರತ ಹಾಗೂ ಪಾಕಿಸ್ತಾನ ಹೊರತಾಗಿ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿರುವ ಥಾಯ್ಲೆಂಡ್‌ನ ಕರೆನ್ಸಿಯು (Baht) ಶೇಕಡಾ 1.42ರಷ್ಟು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT