ಶನಿವಾರ, ಜೂನ್ 19, 2021
24 °C
ಮಾರ್ಚ್‌–ಜೂನ್‌ ಅವಧಿ

ಕೋವಿಡ್‌ ಸಂಕಷ್ಟದ ಹೊರತಾಗಿಯೂ ದೇಶದ ಕೃಷಿ ಉತ್ಪನ್ನ ರಫ್ತು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ಬಿಕ್ಕಟ್ಟಿನ ಹೊರತಾಗಿಯೂ ಈ ವರ್ಷದ ಮಾರ್ಚ್‌–ಜೂನ್‌ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು ಮೌಲ್ಯ ₹ 25,552 ಕೋಟಿಗಳಷ್ಟಾಗಿದೆ. 2019ರ ಮಾರ್ಚ್‌–ಜೂನ್‌ ಅವಧಿಯಲ್ಲಿ ₹ 20,734 ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳು ರಫ್ತಾಗಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಫ್ತು ಮೌಲ್ಯ ಶೇಕಡ 23ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸಲು ‘ರಫ್ತು ಉತ್ತೇಜನ ವೇದಿಕೆ’ಯಡಿ ನಿರ್ದಿಷ್ಟ ಉತ್ಪನ್ನಗಳ ರಫ್ತಿಗೆ ಯೋಜನೆ ರೂಪಿಸಲಾಗಿದೆ ಎಂದು ಅದು ಹೇಳಿದೆ.

ವಿದೇಶಿ ವಿನಿಮಯ ಗಳಿಕೆಗೆ ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವುದು ಬಹಳ ಮುಖ್ಯವಾಗಿದೆ. ಗೋಧಿ ಉತ್ಪಾದನೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಆದರೆ, ರಫ್ತು ಮಾಡುವುದರಲ್ಲಿ 34ನೇ ಸ್ಥಾನದಲ್ಲಿದೆ.

ಗಲ್ಫ್‌ ದೇಶಗಳು ಭಾರತಕ್ಕೆ ಪ್ರಮುಖ ಮಾರುಕಟ್ಟೆಯಾಗಿವೆ. ಹೀಗಾಗಿ ಅಲ್ಲಿ ಮಾರುಕಟ್ಟೆ ಪಾಲನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಗಮನ ನೀಡಲಾಗುತ್ತಿದೆ. ಸದ್ಯ ಗಲ್ಫ್‌ ದೇಶಗಳ ಒಟ್ಟಾರೆ ಆಮದಿನಲ್ಲಿ ಭಾರತದ ಪಾಲು ಶೇ 10–12ರಷ್ಟು ಮಾತ್ರವೇ ಇದೆ ಎಂದು ಸಚಿವಾಲಯ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು