ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲಿದ್ದಲು ಉತ್ಪಾದನೆ ಶೇ 14ರಷ್ಟು ಹೆಚ್ಚಳ: ಸಚಿವಾಲಯ

Published 2 ಜುಲೈ 2024, 14:48 IST
Last Updated 2 ಜುಲೈ 2024, 14:48 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಜೂನ್‌ ತಿಂಗಳಲ್ಲಿ 8.46 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆಯಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.

ಕಳೆದ ವರ್ಷದ ಜೂನ್‌ನಲ್ಲಿ 7.39 ಕೋಟಿ ಟನ್‌ ಉತ್ಪಾದನೆ ಆಗಿತ್ತು. ಇದಕ್ಕೆ ಹೋಲಿಸಿದರೆ ಶೇ 14ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಭಾರತೀಯ ಕಲ್ಲಿದ್ದಲು ನಿಗಮವು (ಸಿಐಎಲ್‌) 6.31 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದಿಸಿದ್ದು, ಶೇ 8ರಷ್ಟು ಹೆಚ್ಚಳವಾಗಿದೆ. 8.57 ಕೋಟಿ ಟನ್‌ ಕಲ್ಲಿದ್ದಲು ವಿತರಣೆಯಾಗಿದೆ. ಜೂನ್‌ 30ರ ವರದಿ ಪ್ರಕಾರ ಕಲ್ಲಿದ್ದಲು ಕಂಪನಿಗಳ ಬಳಿ ಹೆಚ್ಚುವರಿಯಾಗಿ 9.50 ಕೋಟಿ ಟನ್‌ ಕಲ್ಲಿದ್ದಲು ದಾಸ್ತಾನಿದೆ. ಈ ಏರಿಕೆಯು ಕಲ್ಲಿದ್ದಲು ವಲಯದ ದೃಢ ಪ್ರದರ್ಶನ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ತಿಳಿಸಿದೆ.

ದೇಶೀಯಮಟ್ಟದಲ್ಲಿನ ಕಲ್ಲಿದ್ದಲು ಉತ್ಪಾದನೆಯಲ್ಲಿ ನಿಗಮದ ಪಾಲು ಶೇ 80ರಷ್ಟಕ್ಕೂ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT