ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ರಫ್ತು ಶೇ 2.83 ಇಳಿಕೆ

Published 15 ಡಿಸೆಂಬರ್ 2023, 15:53 IST
Last Updated 15 ಡಿಸೆಂಬರ್ 2023, 15:53 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಫ್ತು ಪ್ರಮಾಣ ಪ್ರಸಕ್ತ ನವೆಂಬರ್‌ನಲ್ಲಿ ಶೇ 2.83ರಷ್ಟು ಇಳಿಕೆಯಾಗಿ, ₹2.81 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹2.89 ಲಕ್ಷ ಕೋಟಿ ಇತ್ತು ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಆಮದು ಪ್ರಮಾಣವು ಹಿಂದಿನ ವರ್ಷದ ನವೆಂಬರ್‌ನಿಂದ ಪ್ರಸಕ್ತ ವರ್ಷದ ನವೆಂಬರ್‌ಗೆ ಹೋಲಿಸಿದರೆ ₹4.72 ಲಕ್ಷ ಕೋಟಿಯಿಂದ ₹4.52 ಲಕ್ಷ ಕೋಟಿಗೆ ಇಳಿಕೆ ಆಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿ–ಅಂಶಗಳು ತಿಳಿಸಿವೆ.

ದೇಶದ ವ್ಯಾಪಾರ ಕೊರತೆಯು ನವೆಂಬರ್‌ನಲ್ಲಿ ₹1.70 ಲಕ್ಷ ಕೋಟಿ ಇತ್ತು.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ರಫ್ತು ಶೇ 6.51 ಇಳಿಕೆಯಾಗಿ ₹23.14 ಲಕ್ಷ ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ ಆಮದು ಪ್ರಮಾಣ ಶೇ 8.67ರಷ್ಟು ಇಳಿಕೆಯಾಗಿ ₹36.95 ಲಕ್ಷ ಕೋಟಿಗೆ ತಲುಪಿದೆ ಎಂದು ವಿವರಿಸಿವೆ. 

ಜಾಗತಿಕ ಆರ್ಥಿಕ ಮಂದಗತಿಯ ನಡುವೆಯೂ ಭಾರತದ ರಫ್ತು ಆಶಾದಾಯಕವಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT