ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ತೈಲ: ಹೆಚ್ಚುತ್ತಲೇ ಇದೆ ಆಮದು

ಭಾರತದ ಒಟ್ಟು ಆಮದಿನಲ್ಲಿ ರಷ್ಯಾ ಪಾಲು ಶೇ 42ರಷ್ಟು
Published 4 ಜೂನ್ 2023, 15:24 IST
Last Updated 4 ಜೂನ್ 2023, 15:24 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಮೇ ತಿಂಗಳಿನಲ್ಲಿ ಶೇ 15ರಷ್ಟು ಹೆಚ್ಚಾಗಿದೆ. ಸೌದಿ ಅರೇಬಿಯಾ, ಇರಾಕ್‌, ಯುಎಇ ಮತ್ತು ಅಮೆರಿಕದಿಂದ ಆಮದಾಗುವ ಒಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನ ತೈಲವು ರಷ್ಯಾದಿಂದ ಭಾರತಕ್ಕೆ ಆಮದಾಗುತ್ತಿದೆ ಎಂದು ಉದ್ಯಮ ವಲಯದ ಅಂಕಿ–ಅಂಶಗಳು ಹೇಳುತ್ತಿವೆ.

ಮೇ ತಿಂಗಳಿನಲ್ಲಿ ಭಾರತವು ರಷ್ಯಾದಿಂದ ಪ್ರತಿ ದಿನಕ್ಕೆ 19.6 ಲಕ್ಷ ಬ್ಯಾರಲ್‌ ತೈಲವನ್ನು ಆಮದು ಮಾಡಿಕೊಂಡಿದೆ. ಏಪ್ರಿಲ್‌ಗೆ ಹೋಲಿಸಿದರೆ ಶೇ 15ರಷ್ಟು ಹೆಚ್ಚಾಗಿದೆ ಎಂದು ಇಂಧನ ಸಾಗಣೆಯ ಅಂಕಿ–ಅಂಶಗಳನ್ನು ದಾಖಲಿಸುವ ವೊರ್ಟೆಕ್ಸಾ ಕಂಪನಿ ಹೇಳಿದೆ.

ಭಾರತವು ಮೇನಲ್ಲಿ ಆಮದು ಮಾಡಿಕೊಂಡಿರುವ ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಶೇ 42ರವರೆಗೆ ಇದೆ. ಈಚಿನ ವರ್ಷಗಳಲ್ಲಿ ದೇಶವೊಂದು ಹೊಂದಿರುವ ಅತಿ ಹೆಚ್ಚಿನ ಪಾಲು ಇದಾಗಿದೆ.

ಸೌದಿ ಅರೇಬಿಯಾದಿಂದ ಭಾರತಕ್ಕೆ ಆಮದಾಗುವ ತೈಲದ ಪ್ರಮಾಣವು ಮೇನಲ್ಲಿ 5.60 ಲಕ್ಷ ಟನ್‌ಗೆ ಇಳಿಕೆ ಆಗಿದ್ದು, 2021ರ ಫೆಬ್ರುವರಿ ನಂತರದ ಕನಿಷ್ಠ ಮಟ್ಟ ಇದಾಗಿದೆ.

ರಷ್ಯಾ–ಉಕ್ರೇನ್‌ ಸಮರ ಆರಂಭ ಆಗುವುದಕ್ಕೂ ಮೊದಲು ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದಲ್ಲಿ ಶೇ 90ರಷ್ಟು ಪಾಲು ಒಪೆಕ್‌ನಿಂದ ಪೂರೈಕೆ ಆಗುತ್ತಿತ್ತು. ಆದರೆ, ಫೆಬ್ರುವರಿಯಲ್ಲಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿದ ಬಳಿಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಿದವು. ಇದರಿಂದಾಗಿ ಜಾಗತಿಕ ಮಾರುಕಟ್ಟೆಯ ದರಕ್ಕಿಂತ ಕಡಿಮೆ ಬೆಲೆಗೆ ರಷ್ಯಾ ದೇಶವು ಭಾರತಕ್ಕೆ ತೈಲ ಪೂರೈಕೆ ಆರಂಭಿಸಿತು. ಹೀಗಾಗಿ ಮೇನಲ್ಲಿ ಭಾರತಕ್ಕೆ ಪೂರೈಕೆ ಆಗಿರುವ ತೈಲದಲ್ಲಿ ಒಪೆಕ್‌ ಪಾಲು ಶೇ 39ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT