ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕಾ ವಲಯ: ಬೆಳವಣಿಗೆ ಮಟ್ಟ ಅತ್ಯಲ್ಪ ಇಳಿಕೆ

Last Updated 1 ಮಾರ್ಚ್ 2023, 16:25 IST
ಅಕ್ಷರ ಗಾತ್ರ

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳ ಬೆಳವಣಿಗೆ ಪ್ರಮಾಣವು ಫೆಬ್ರುವರಿಯಲ್ಲಿ ಅತ್ಯಲ್ಪ ಇಳಿಕೆಯನ್ನು ಕಂಡಿವೆ. ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪಿಎಂಐ ಸೂಚ್ಯಂಕವು ಫೆಬ್ರುವರಿಯಲ್ಲಿ 55.3ಕ್ಕೆ ತಲುಪಿದೆ. ಇದು ಜನವರಿಯಲ್ಲಿ 55.4ರಷ್ಟು ಇತ್ತು.

ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. ಅದಕ್ಕಿಂತ ಕಡಿಮೆ ಇದ್ದರೆ, ಕುಸಿತವೆಂದು ಅರ್ಥೈಸಲಾಗುತ್ತದೆ.

ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಬಂದಿಲ್ಲ. ಈಗಿನ ಬೇಡಿಕೆಗಳಿಗೆ ಅಗತ್ಯವಿರುವ ಸಿಬ್ಬಂದಿ ಕಂಪನಿಗಳ ಬಳಿ ಇದ್ದಾರೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹ ನಿರ್ದೇಶಕಿ ಪಾಲಿಯಾಮಾ ಡಿ ಲಿಮಾ ಹೇಳಿದ್ದಾರೆ.

ಹೊಸ ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೆ ಹೆಚ್ಚಿನ ಕೊಡುಗೆಯು ದೇಶಿ ಮಾರುಕಟ್ಟೆಗಳಿಂದಲೇ ಬಂದಿದೆ. ವಿದೇಶಗಳಿಂದ ಬರುವ ಕಾರ್ಯಾದೇಶವು ಬಹಳ ಕಡಿಮೆ ‍ಪ್ರಮಾಣದಲ್ಲಿ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT