ನವದೆಹಲಿ: ದೇಶದ ತಯಾರಿಕಾ ವಲಯದ ಪ್ರಗತಿ ನವೆಂಬರ್ ತಿಂಗಳಲ್ಲಿ 11 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ವರದಿ ಸೋಮವಾರ ತಿಳಿಸಿದೆ.

ಅಕ್ಟೋಬರ್ನಲ್ಲಿ ಸೂಚ್ಯಂಕವು 57.5 ದಾಖಲಾಗಿತ್ತು. ಆದರೆ, ನವೆಂಬರ್ನಲ್ಲಿ ಸೂಚ್ಯಂಕವು 56.5ಕ್ಕೆ ಇಳಿದಿದೆ ಎಂದು ಎಚ್ಎಸ್ಬಿಸಿ ಇಂಡಿಯಾದ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕದ (ಪಿಎಂಐ) ವರದಿ ತಿಳಿಸಿದೆ. ಹೆಚ್ಚಿದ ಹಣದುಬ್ಬರ ಮತ್ತು ದೇಶೀಯ ಬೇಡಿಕೆ ಮಂದಗೊಂಡಿದ್ದರಿಂದ ಪ್ರಗತಿ ಇಳಿದಿದೆ. ಆದರೂ, ಬೆಳವಣಿಗೆಯ ವೇಗವು ದೀರ್ಘಾವಧಿಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಹೇಳಿದೆ.

ಸೂಚ್ಯಂಕಗಳು 50ಕ್ಕಿಂತ ಕಡಿಮೆ ಇದ್ದರೆ ನಕಾರಾತ್ಮಕ ಪ್ರಗತಿ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಹೆಚ್ಚಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

‘ನವೆಂಬರ್ನಲ್ಲಿ ತಯಾರಿಕಾ ವಲಯದ ಪಿಎಂಐ 56.5 ದಾಖಲಾಗಿದೆ. ಇದು ಅಕ್ಟೋಬರ್ನಲ್ಲಿ ದಾಖಲಾಗಿದ್ದಕ್ಕಿಂತಲೂ ಕಡಿಮೆಯಾಗಿದೆ. ಆದರೂ ಸೂಚ್ಯಂಕವು ಸಕಾರಾತ್ಮಕ ವಲಯದಲ್ಲಿದೆ’ ಎಂದು ಎಚ್ಎಸ್ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.

ಹೊಸ ರಫ್ತು ಆರ್ಡರ್ ಪ್ರಮಾಣ ನಾಲ್ಕು ತಿಂಗಳ ಗರಿಷ್ಠವಾಗಿದೆ. ಇದು ದೇಶದ ತಯಾರಿಕಾ ವಲಯದ ಬೆಳವಣಿಗೆಗೆ ಉತ್ತೇಜನ ನೀಡಿತು. ಆದರೆ, ಇದೇ ವೇಳೆ ಹೆಚ್ಚುತ್ತಿರುವ ಹಣದುಬ್ಬರದಿಂದ ಉತ್ಪಾದನೆಯ ವಿಸ್ತರಣೆ ಇಳಿಕೆಯಾಗಿದೆ ಎಂದು ಹೇಳಿದೆ.

ರಾಸಾಯನಿಕ, ಹತ್ತಿ, ಚರ್ಮ, ರಬ್ಬರ್ ಸೇರಿ ವಿವಿಧ ಸರಕುಗಳ ತಯಾರಿಕಾ ಬೆಲೆ ಏರಿಕೆಯಾಗಿದೆ. ತಯಾರಿಕಾ ವೆಚ್ಚ, ಕಾರ್ಮಿಕರು, ಸಾರಿಗೆ ವೆಚ್ಚದಲ್ಲಿನ ಹೆಚ್ಚಳದಿಂದ ಉತ್ಪಾದನಾ ದರವು 11 ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಏರಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿದವು ಎಂದು ಭಂಡಾರಿ ಹೇಳಿದ್ದಾರೆ.

ದರ ಏರಿಕೆಯು ದೇಶೀಯ ಮಾರಾಟವನ್ನು ಸ್ವಲ್ಪ ಕಡಿಮೆ ಮಾಡಿದರೂ, ಹೊಸ ರಫ್ತು ಆರ್ಡರ್ಗಳು ಬೆಳವಣಿಗೆಗೆ ಸಹಕರಿಸಿದವು. ಬಾಂಗ್ಲಾದೇಶ, ಚೀನಾ, ಇರಾನ್, ಇಟಲಿ, ನೇಪಾಳ, ಜಪಾನ್, ಬ್ರಿಟನ್ ಮತ್ತು ಅಮೆರಿಕದಿಂದ ಬೇಡಿಕೆ ಹೆಚ್ಚಿದೆ. ಇದರಿಂದ ದೇಶದ ಕೈಗಾರಿಕೆಗಳು ಉತ್ಪಾದನೆಯನ್ನು ಹೆಚ್ಚಿಸಿದವು. ನೌಕರರ ನೇಮಕ ಪ್ರಮಾಣವು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ತಯಾರಿಕಾ ವಲಯದ ಸೂಚ್ಯಂಕ

2023

ನವೆಂಬರ್;56.0

ಡಿಸೆಂಬರ್;54.9

2024

ಜನವರಿ;56.5

ಫೆಬ್ರುವರಿ;56.9

ಮಾರ್ಚ್;59.1

ಏಪ್ರಿಲ್;58.8

ಮೇ;57.5

ಜೂನ್;58.3

ಜುಲೈ;58.1

ಆಗಸ್ಟ್;57.5

ಸೆಪ್ಟೆಂಬರ್;56.5

ಅಕ್ಟೋಬರ್;57.5

ನವೆಂಬರ್;56.5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.