ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ: 13 ತಿಂಗಳ ಗರಿಷ್ಠ ಮಟ್ಟಕ್ಕೆ ತಯಾರಿಕಾ ಚಟುವಟಿಕೆ

Last Updated 2 ಜನವರಿ 2023, 14:09 IST
ಅಕ್ಷರ ಗಾತ್ರ

ನವದೆಹಲಿ: ಬೇಡಿಕೆ ಹೆಚ್ಚಾಗುತ್ತಿರುವುದರ ಜೊತೆಗೆ ಹೊಸ ವಹಿವಾಟುಗಳಲ್ಲಿ ಏರಿಕೆ ಆಗುತ್ತಿರುವ ಕಾರಣ, ದೇಶದ ತಯಾರಿಕಾ ವಲಯದ ಚಟುವಟಿಕೆಯು ಡಿಸೆಂಬರ್‌ನಲ್ಲಿ 13 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ನವೆಂಬರ್‌ನಲ್ಲಿ 55.7ರಷ್ಟು ಇದ್ದಿದ್ದು ಡಿಸೆಂಬರ್‌ನಲ್ಲಿ 57.8ಕ್ಕೆ ಏರಿಕೆ ಆಗಿದೆ. 2021ರ ನವೆಂಬರ್‌ ತಿಂಗಳ ಬಳಿಕ ತಯಾರಿಕಾ ವಲಯದಲ್ಲಿ ಈ ಪ್ರಮಾಣದ ಬೆಳವಣಿಗೆ ದಾಖಲಾಗಿರುವುದು ಡಿಸೆಂಬರ್‌ನಲ್ಲಿ.

ಪೂರೈಕೆ ವ್ಯವಸ್ಥೆ ಸುಧಾರಿಸಿರುವುದು ಸಹ ವಲಯದ ಬೆಳವಣಿಗೆ ಮೇಲೆ ಪ್ರಭಾವ ಬೀರಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ಮುನ್ನೋಟದ ಬಗ್ಗೆ ಕಂಪನಿಗಳು ಆಶಾವಾದ ಹೊಂದಿವೆ. ಜಾಹೀರಾತು ಮತ್ತು ಬೇಡಿಕೆಯು ವಲಯದ ಬೆಳವಣಿಗೆಗೆ ಪ್ರಮುಖ ಅಂಶಗಳಾಗಿವೆ. ತಯಾರಿಕೆಯನ್ನು ಈಗಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾಡುವ ವಿಶ್ವಾಸವನ್ನು ಕಂಪನಿಗಳು ಹೊಂದಿವೆ. ಆದರೆ, ಜಾಗತಿಕ ಆರ್ಥಿಕ ಬೆಳವಣಿಗೆಯ ಮುನ್ನೋಟವು ಉತ್ತಮವಾಗಿ ಇಲ್ಲದೇ ಇರುವುದರಿಂದ ದೇಶದ ತಯಾರಿಕಾ ಉದ್ಯಮದ ಚೇತರಿಕೆಯ ಬಗ್ಗೆ ಕೆಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಅವರು ಹೇಳಿದ್ದಾರೆ.

ತಯಾರಿಕಾ ವೆಚ್ಚವು ಡಿಸೆಂಬರ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ಇತ್ತು. ಒಟ್ಟಾರೆಯಾಗಿ ತಯಾರಿಕಾ ವಲಯದಲ್ಲಿ ಹಣದುಬ್ಬರವು ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ತುಸು ಇಳಿಕೆ ಆಗಿದ್ದು, 2020ರ ಸೆಪ್ಟೆಂಬರ್‌ ನಂತರ ಎರಡನೇ ಬಾರಿಗೆ ಕಡಿಮೆ ಮಟ್ಟಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT