ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಿಂದ ಕೋಕಿಂಗ್ ಕಲ್ಲಿದ್ದಲು ಖರೀದಿ ಹೆಚ್ಚಿಸಲು ಸೇಲ್‌ ನಿರ್ಧಾರ

Published 6 ನವೆಂಬರ್ 2023, 15:15 IST
Last Updated 6 ನವೆಂಬರ್ 2023, 15:15 IST
ಅಕ್ಷರ ಗಾತ್ರ

ನವದೆಹಲಿ: ಸೇಲ್‌ ಇಂಡಿಯಾ ಕಂಪನಿಯು ಉಕ್ಕು ಉದ್ಯಮದಲ್ಲಿ ಬಳಸುವ ಕೋಕಿಂಗ್‌ ಕಲ್ಲಿದ್ದಲನ್ನು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಮುಂದಾಗಿದೆ.

ರಷ್ಯಾದ ಕೋಕಿಂಗ್‌ ಕಲ್ಲಿದ್ದಲಿನ ಬೆಲೆಯು ಕಡಿಮೆ ಇರುವುದರಿಂದ ಡಿಸೆಂಬರ್‌ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ಒಂದು ಬಾರಿಗೆ 75 ಸಾವಿರ ಟನ್‌ನಂತೆ ಒಟ್ಟು ನಾಲ್ಕು ಹಂತದಲ್ಲಿ ರಷ್ಯಾದಿಂದ ಆಮದು ಮಾಡಿಕೊಳ್ಳಲು ಸೇಲ್‌ ನಿರ್ಧರಿಸಿದೆ ಎಂದು ಕಂಪನಿಯ ಅಧ್ಯಕ್ಷ ಅಮರೇಂದು ಪ್ರಕಾಶ್ ಸೋಮವಾರ ತಿಳಿಸಿದ್ದಾರೆ.

ಸಮಾವೇಶವೊಂದರ ಸಂದರ್ಭದಲ್ಲಿ ಮಾತನಾಡಿದ ಅವರು, ಆಸ್ಡ್ರೇಲಿಯಾಗೆ ಹೋಲಿಸಿದರೆ ರಷ್ಯಾದ ಕೋಕಿಂಗ್ ಕಲ್ಲಿದ್ದಲು ಬೆಲೆ ಕಡಿಮೆ ಇದೆ ಎಂದು ಹೇಳಿದ್ದಾರೆ.

ಭಾರತವು ಆಮದು ಮಾಡಿಕೊಳ್ಳುತ್ತಿರುವ ಕೋಕಿಂಗ್ ಕಲ್ಲಿದ್ದಲಿನಲ್ಲಿ ಆಸ್ಟ್ರೇಲಿಯಾದ ಪಾಲು ಅರ್ಧಕ್ಕಿಂತಲೂ ಹೆಚ್ಚಿಗೆ ಇದೆ. ಭಾರತವು ವರ್ಷಕ್ಕೆ 7 ಕೋಟಿ ಟನ್‌ನಷ್ಟು ಆಮದು ಮಾಡಿಕೊಳ್ಳುತ್ತಿದೆ. ಆಸ್ಟ್ರೇಲಿಯಾ ಅಲ್ಲದೆ, ರಷ್ಯಾ ಮತ್ತು ಅಮೆರಿಕದಿಂದಲೂ ಖರೀದಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT