ನವದೆಹಲಿ: ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರಬಹುದು ಎಂದು ‘ಇ.ವೈ ಎಕಾನಮಿ ವಾಚ್’ ವರದಿ ತಿಳಿಸಿದೆ.

2047ರ ವೇಳೆಗೆ ವಿಕಸಿತ ಭಾರತ ಗುರಿ ಸಾಧಿಸಲು, ತೆರಿಗೆ ಸುಧಾರಣೆಗಳ ಮೂಲಕ ದೇಶವು ತನ್ನ ತೆರಿಗೆ–ಜಿಡಿಪಿ ಅನುಪಾತವನ್ನು ಹೆಚ್ಚಿಸಬೇಕಿದೆ ಎಂದು ಗುರುವಾರ ತಿಳಿಸಿದೆ.

ಪ್ರಮುಖ ದೇಶಗಳೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಕಾರಣದಿಂದಾಗಿ ದೇಶದ ಮಧ್ಯಮ ಅವಧಿಯ ಆರ್ಥಿಕ ಸ್ಥಿತಿಯು ಉಜ್ವಲವಾಗಿರುವಂತೆ ಕಾಣುತ್ತಿದೆ. 2026–27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರುವ ಅಂದಾಜಿದೆ ಎಂದು ಇ.ವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ಡಿ.ಕೆ.ಶ್ರೀವಾಸ್ತವ ಹೇಳಿದ್ದಾರೆ.

ವೈಯಕ್ತಿಕ ಆದಾಯ ತೆರಿಗೆ ಮತ್ತು ಜಿಎಸ್ಟಿ ದರ ಪರಿಷ್ಕರಣೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆಗೆದುಕೊಂಡ ಪ್ರಮುಖ ತೆರಿಗೆ ಸುಧಾರಣೆಗಳಾಗಿವೆ. ಈ ಎರಡೂ ಸುಧಾರಣೆಗಳು ಕುಟುಂಬಗಳ ಮಟ್ಟದಲ್ಲಿ ಖರ್ಚಿಗೆ ಸಿಗುವ ವರಮಾನವನ್ನು ಹೆಚ್ಚಿಸಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.