ಕೈಗಾರಿಕಾ ಪ್ರಗತಿ ಕುಸಿತ

7
ಗಣಿಗಾರಿಕೆ, ತಯಾರಿಕಾ ವಲಯದಲ್ಲಿನ ಕಳಪೆ ಸಾಧನೆ

ಕೈಗಾರಿಕಾ ಪ್ರಗತಿ ಕುಸಿತ

Published:
Updated:

ನವದೆಹಲಿ (ಪಿಟಿಐ): ಕೈಗಾರಿಕೆಗಳ ಉತ್ಪಾದನಾ ಬೆಳವಣಿಗೆಯು ಡಿಸೆಂಬರ್‌ ತಿಂಗಳಲ್ಲಿ ಶೇ 2.4ರಷ್ಟಕ್ಕೆ ಕುಸಿತ ಕಂಡಿದೆ.

ಕೈಗಾರಿಕಾ ತಯಾರಿಕಾ ಸೂಚ್ಯಂಕದಲ್ಲಿ (ಐಐಪಿ) ಅಳೆಯಲಾಗುವ ಕಾರ್ಖಾನೆಗಳ ಉತ್ಪಾದನೆಯು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 7.3ರಷ್ಟಿತ್ತು. ಈ ವರ್ಷ, ಗಣಿಗಾರಿಕೆ ವಲಯ ಮತ್ತು ತಯಾರಿಕಾ ವಲಯದಲ್ಲಿನ ಕಳಪೆ ಸಾಧನೆ ಫಲವಾಗಿ ಶೇ 2.4ಕ್ಕೆ ಇಳಿದಿದೆ.

ನವೆಂಬರ್‌ ತಿಂಗಳ ಕೈಗಾರಿಕಾ ಬೆಳವಣಿಗೆಯನ್ನೂ ಶೇ 0.3ರಷ್ಟಕ್ಕೆ ಪರಿಷ್ಕರಿಸಲಾಗಿದೆ. ಹಿಂದಿನ ತಿಂಗಳು ಕೇಂದ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ್ದ ಅಂಕಿ ಅಂಶಗಳಲ್ಲಿ ಇದು ಶೇ 0.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು.

2018ರ ಏಪ್ರಿಲ್‌ನಿಂದ ಡಿಸೆಂಬರ್‌ ಅವಧಿಯಲ್ಲಿನ ಕೈಗಾರಿಕಾ ತಯಾರಿಕೆಯು ಶೇ 4.6ರಷ್ಟು ದಾಖಲಾಗಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 3.7ರಷ್ಟಿತ್ತು. ‘ಐಐಪಿ’ಯಲ್ಲಿ ಶೇ 77.63ರಷ್ಟು ಪಾಲು ಹೊಂದಿರುವ ತಯಾರಿಕಾ ವಲಯದ ಬೆಳವಣಿಗೆಯು ವರ್ಷದ ಹಿಂದಿನ ಶೇ 8.7ಕ್ಕೆ ಹೋಲಿಸಿದರೆ ಈ ಬಾರಿ ಕೇವಲ
ಶೇ 2.7ರಷ್ಟಕ್ಕೆ ಇಳಿದಿದೆ.

ಗಣಿಗಾರಿಕೆ (ಶೇ 1), ವಿದ್ಯುತ್‌ ವಲಯ (ಶೇ 4.4) ಮತ್ತು ಭಾರಿ ಯಂತ್ರೋಪಕರಣ (ಶೇ 5.9), ಗೃಹೋಪಯೋಗಿ ಸಲಕರಣೆಗಳ ತಯಾರಿಕೆಯು ಶೇ 2.9ರಷ್ಟಾಗಿದ್ದು, ಹಿಂದಿನ ವರ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇದೆ.

ಪ್ರಾಥಮಿಕ ಸರಕುಗಳ ಉತ್ಪಾದನೆಯು ಶೇ 1.2ರಷ್ಟು ಕಡಿಮೆಯಾಗಿದೆ. ಕಟ್ಟಡ ನಿರ್ಮಾಣ ಸರಕುಗಳ ಬೆಳವಣಿಗೆಯು ಮಾತ್ರ 10.1ರಷ್ಟು ಏರಿಕೆ ದಾಖಲಿಸಿದೆ.

ತಯಾರಿಕಾ ವಲಯದ 23 ಕೈಗಾರಿಕಾ ವಲಯಗಳ ಪೈಕಿ, 13 ವಲಯಗಳಲ್ಲಿ ಮಾತ್ರ ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !