ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆ ಶೇ 5.2ರಷ್ಟು ಏರಿಕೆ

Published 12 ಜುಲೈ 2023, 15:50 IST
Last Updated 12 ಜುಲೈ 2023, 15:50 IST
ಅಕ್ಷರ ಗಾತ್ರ

ನವದೆಹಲಿ: ಮೇ ತಿಂಗಳಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣವು ಶೇಕಡ 5.2ರಷ್ಟು ಹೆಚ್ಚಳವಾಗಿದೆ. ಇದು ಏಪ್ರಿಲ್‌ನಲ್ಲಿ ಶೇ 4.5ರಷ್ಟು ಇತ್ತು. ತಯಾರಿಕೆ ಹಾಗೂ ಗಣಿಗಾರಿಕೆ ವಲಯಗಳಲ್ಲಿನ ಉತ್ತಮ ಬೆಳವಣಿಗೆಯ ಕಾರಣದಿಂದಾಗಿ ಈ ಏರಿಕೆ ಕಂಡುಬಂದಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ತಯಾರಿಕಾ ವಲಯದ ಉತ್ಪಾದನೆಯು ಶೇ 5.7ರಷ್ಟು ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಯು ಶೇ 0.9ರಷ್ಟು ಜಾಸ್ತಿಯಾಗಿದೆ. ಗಣಿಗಾರಿಕೆಯ ಉತ್ಪಾದನೆಯು ಶೇ 6.4ರಷ್ಟು ಹೆಚ್ಚಾಗಿದೆ. ಬಂಡವಾಳ ಸರಕು ವಲಯವು ಶೇ 8.2ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT