ಸೋಮವಾರ, ಡಿಸೆಂಬರ್ 9, 2019
24 °C

ಇನ್ಫೊಸಿಸ್‌ ಷೇರು ಮರುಖರೀದಿ ಪರಿಶೀಲನೆ

Published:
Updated:

ಮುಂಬೈ: ಷೇರು ಮರುಖರೀದಿ ಮತ್ತು ವಿಶೇಷ ಲಾಭಾಂಶ ನೀಡುವ ಕುರಿತು ಇದೇ 11ರಂದು ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ  ನಿರ್ಧಾರಕ್ಕೆ ಬರಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೊಸಿಸ್‌ ತಿಳಿಸಿದೆ.

ಸುದೀಪ್‌ ಸಿಂಗ್‌ ರಾಜೀನಾಮೆ: ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿ ಸುದೀಪ್‌ ಸಿಂಗ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸಂಸ್ಥೆಯ ಸೇವೆಗಳು ಮತ್ತು ಸಂಪನ್ಮೂಲ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದ ಸಿಂಗ್‌ ಅವರು ಇಪ್ಪತ್ತು ವರ್ಷಗಳ ಕಾಲ ಸಂಸ್ಥೆಯಲ್ಲಿದ್ದರು. ಇವರ ರಾಜೀನಾಮೆ ಬಗ್ಗೆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರತಿಕ್ರಿಯಿಸಿ (+)