ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಲ್ಲರೆ ಹಣದುಬ್ಬರ ಏರಿಕೆ; 4 ತಿಂಗಳ ಗರಿಷ್ಠ ಮಟ್ಟದ ದಾಖಲು

Published 12 ಜನವರಿ 2024, 16:27 IST
Last Updated 12 ಜನವರಿ 2024, 16:27 IST
ಅಕ್ಷರ ಗಾತ್ರ

ನವದೆಹಲಿ: 2023ರ ಡಿಸೆಂಬರ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರವು ಶೇ 5.69ರಷ್ಟು ಏರಿಕೆಯಾಗಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ತರಕಾರಿಗಳು, ಬೇಳೆ ಮತ್ತು ಸಾಂಬಾರು ಪದಾರ್ಥಗಳ ಬೆಲೆ ಏರಿಕೆಯೇ ಇದಕ್ಕೆ ಕಾರಣವಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಗ್ರಾಹಕರ ದರ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಶೇ 5.55ರಷ್ಟು ಏರಿಕೆಯಾಗಿತ್ತು. 2022ರ ಡಿಸೆಂಬರ್‌ನಲ್ಲಿ ಶೇ 5.72ರಷ್ಟು ದಾಖಲಾಗಿತ್ತು.  

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ಅಂಕಿಅಂಶದ ಪ್ರಕಾರ ಆಹಾರ ಪದಾರ್ಥಗಳ ಹಣದುಬ್ಬರವು 2022ರ ಡಿಸೆಂಬರ್‌ನಲ್ಲಿ ಶೇ 4.9ರಷ್ಟಿತ್ತು. 2023ರ ಡಿಸೆಂಬರ್‌ನಲ್ಲಿ ಶೇ 9.53ರಷ್ಟು ಏರಿಕೆ ಕಂಡಿದೆ.  

ವಾರ್ಷಿಕವಾಗಿ ತರಕಾರಿ ಬೆಲೆಯು ಶೇ 27.64ರಷ್ಟು ಏರಿಕೆಯಾಗಿದೆ. ಬೇಳೆಗಳ ದರ ಶೇ 20.73 ಮತ್ತು ಸಾಂಬಾರು ಪದಾರ್ಥಗಳ ಬೆಲೆಯು ಶೇ 19.69ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಖಾದ್ಯ ತೈಲ ಮತ್ತು ಕೊಬ್ಬಿನಾಂಶ ಇರುವ ಉತ್ಪನ್ನಗಳ ದರವು ಶೇ 14.96ರಷ್ಟು ಕಡಿಮೆಯಾಗಿದೆ.

ಹಣದುಬ್ಬರವು ಗ್ರಾಮೀಣ ಮಟ್ಟದಲ್ಲಿ ಶೇ 5.93ರಷ್ಟು ಹಾಗೂ ನಗರ ಮಟ್ಟದಲ್ಲಿ ಶೇ 5.46ರಷ್ಟಿದೆ. ಆದರೆ, ನಗರಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಕಡಿಮೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT