ನವದೆಹಲಿ: ‘ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಹೂಡಿಕೆ ಮಾಡುವ ಮನಸ್ಸು ಇರುವವರು ಕಂಪನಿಯ ಮೇಲೆ ಸರ್ಕಾರದ ನಿಯಂತ್ರಣ ಇರುವ ಬಗ್ಗೆ ಭಯಪಡುವ ಅಗತ್ಯ ಇಲ್ಲ. ಏಕೆಂದರೆ, ಕಂಪನಿಯ ಆಡಳಿತ ಮಂಡಳಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆಯೇ ಹೊರತು ಸರ್ಕಾರ ಅಲ್ಲ’ ಎಂದು ಎಲ್ಐಸಿ ಅಧ್ಯಕ್ಷ ಎಂ.ಆರ್. ಕುಮಾರ್ ಹೇಳಿದ್ದಾರೆ.