ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರದಿಂದ ಪೇಟಿಎಂ ಐಪಿಒ

Last Updated 6 ನವೆಂಬರ್ 2021, 16:44 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಮುಂದಿನ ವಾರ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಪೇಟಿಎಂ ಕಂಪನಿಯ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌, ಸಫೈರ್‌ ಫುಡ್ಸ್‌ ಇಂಡಿಯಾ ಮತ್ತು ಲೇಟೆಂಟ್‌ವೀವ್‌ ಅನಲಿಟಿಕ್ಸ್‌ ಕಂಪನಿಗಳು ಬಂಡವಾಳ ಸಂಗ್ರಹಿಸಲಿವೆ. ಈ ಮೂರು ಕಂಪನಿಗಳ ಐಪಿಒದಿಂದ ಒಟ್ಟಾರೆ ₹ 21 ಸಾವಿರ ಕೋಟಿ ಸಂಗ್ರಹ ಆಗುವ ನಿರೀಕ್ಷೆ ಇದೆ.

ಪೇಟಿಎಂ ಬ್ರ್ಯಾಂಡ್‌ ಅಡಿಯಲ್ಲಿ ಕಾರ್ಯಾಚರಿಸುವ ಒನ್‌97 ಕಮ್ಯುನಿಕೇಷನ್ಸ್‌ ಐಪಿಒಗೆ ಅರ್ಜಿ ಸಲ್ಲಿಸಲು ಸೋಮವಾರದಿಂದ ಬುಧವಾರದವರೆಗೆ ಅವಕಾಶ ಇರಲಿದೆ. ₹ 18,300 ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಕಂಪನಿ ಇಟ್ಟುಕೊಂಡಿದೆ. ಇದರಲ್ಲಿ ₹ 8,300 ಕೋಟಿ ಮೊತ್ತದ ಹೊಸ ಷೇರುಗಳು ಮತ್ತು ಹಾಲಿ ಷೇರುದಾರರಿಂದ ₹ 10 ಸಾವಿರ ಕೋಟಿ ಮೊತ್ತದ ಆಫರ್‌ ಫರ್‌ ಸೇಲ್‌ (ಒಎಫ್‌ಎಸ್‌) ಸೇರಿದೆ. ಪ್ರತಿ ಷೇರಿಗೆ ₹ 2,080 ರಿಂದ ₹ 2,150 ದರ ನಿಗದಿ ಮಾಡಲಾಗಿದೆ.

ಪೇಟಿಎಂ ಐಪಿಒ ದೇಶದಲ್ಲಿ ಇದುವರೆಗೆ ನಡೆದಿರುವ ಐಪಿಒಗಳ ಪೈಕಿ ಅತಿ ದೊಡ್ಡ ಮೊತ್ತದ್ದಾಗಿರಲಿದೆ. ಈ ಹಿಂದೆ 2010ರಲ್ಲಿ ಕೋಲ್‌ ಇಂಡಿಯಾ ಕಂಪನಿಯು ಐಪಿಒ ಮೂಲಕ ₹ 15,200 ಕೋಟಿ ಸಂಗ್ರಹಿಸಿತ್ತು.

ಸಫೈರ್‌ ಫುಡ್ಸ್‌ ಇಂಡಿಯಾದ ಐಪಿಒ ನವೆಂಬರ್‌ 9ರಂದು ಆರಂಭ ಆಗಲಿದೆ. ₹ 2,073 ಕೋಟಿ ಸಂಗ್ರಹ ಆಗುವ ನಿರೀಕ್ಷೆ ಇದೆ. ಲೇಟೆಂಟ್‌ವೀವ್ ಅನಲಿಟಿಕ್ಸ್‌ ಕಂಪನಿಯ ಐಪಿಒದಲ್ಲಿ ₹ 474 ಕೋಟಿ ಮೊತ್ತದ ಹೊಸ ಷೇರುಗಳು ಹಾಗೂ ₹ 126 ಕೋಟಿ ಮೊತ್ತದ ಒಎಫ್‌ಎಸ್‌ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT