ಐ.ಟಿ: ಮರುಪಾವತಿ ಮಾಹಿತಿ ಸುಲಭ

7

ಐ.ಟಿ: ಮರುಪಾವತಿ ಮಾಹಿತಿ ಸುಲಭ

Published:
Updated:
Deccan Herald

ನವದೆಹಲಿ: ಆದಾಯ ತೆರಿಗೆ ಪಾವತಿದಾರರು ಮೂಲದಲ್ಲಿಯೇ ಕಡಿತವಾದ (ಟಿಡಿಎಸ್‌) ಮೊತ್ತದಲ್ಲಿನ ಹೆಚ್ಚುವರಿ ತೆರಿಗೆಯ ಮರುಪಾವತಿ ಕುರಿತ ಮಾಹಿತಿ ಪಡೆಯುವುದನ್ನು ಸರಳಗೊಳಿಸಲಾಗಿದೆ.

‘ಟಿಡಿಎಸ್‌’ನಲ್ಲಿ ಒಂದು ವೇಳೆ ಹೆಚ್ಚುವರಿ ತೆರಿಗೆ ಪಾವತಿಯಾಗಿದ್ದರೆ ಅದನ್ನು ಮರಳಿ ಪಡೆಯಲು ಅವಕಾಶ ಇದೆ. 2018–19ನೆ ಸಾಲಿನ ಅಂದಾಜು ವರ್ಷದ ಆದಾಯ ತೆರಿಗೆ  ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್‌) ಸಲ್ಲಿಕೆಗೆ ಆಗಸ್ಟ್‌ 31 ಕೊನೆಯ ದಿನವಾಗಿತ್ತು. ಈಗಾಗಲೇ ಐಟಿಆರ್‌ ಸಲ್ಲಿಸಿ ಹಣ ಮರುಪಾವತಿಯ ನಿರೀಕ್ಷೆಯಲ್ಲಿ ಇರುವವರು ಈ ಪ್ರಕ್ರಿಯೆಯ ಜಾಡಿನ ವಿವರ ಪಡೆಯಬಹುದಾಗಿದೆ.

www.incometaxindia.gov.in ಅಥವಾ www.tin-nsdl.com ತಾಣದಲ್ಲಿ ‘ಸ್ಟೇಟಸ್‌ ಆಫ್‌ ಟ್ಯಾಕ್ಸ್‌ ರಿಫಂಡ್‌’ ನಲ್ಲಿ ಪ್ಯಾನ್‌ ನಮೂದಿಸಿದರೆ ತೆರಿಗೆ ಮರುಪಾವತಿಯಾಗುವ ದಿನವನ್ನು ವೀಕ್ಷಿಸಬಹುದು. ಮರುಪಾವತಿಯು ಬ್ಯಾಂಕ್‌ ಖಾತೆಗೆ ನೇರವಾಗಿ ಇಲ್ಲವೆ ಚೆಕ್‌ ಹಾಗೂ ಡಿಮ್ಯಾಂಡ್‌ ಡ್ರಾಫ್ಟ್‌ ಮೂಲಕ ಪಾವತಿಯಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !