ನವದೆಹಲಿ: ‘24 ಮಂತ್ರ ಆರ್ಗ್ಯಾನಿಕ್’ ಬ್ರ್ಯಾಂಡ್ನ ಮಾಲೀಕತ್ವ ಹೊಂದಿರುವ ‘ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್’ ಕಂಪನಿಯ ಸ್ವಾಧೀನವನ್ನು ಐಟಿಸಿ ಪೂರ್ಣಗೊಳಿಸಿದೆ. ಐಟಿಸಿ ಈ ಕಂಪನಿಯನ್ನು ₹472.5 ಕೋಟಿಗೆ ಖರೀದಿಸಿದೆ.

ಬಹಳ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಸಾವಯವ ಆಹಾರ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಬಲ ಹೆಚ್ಚಿಸಿಕೊಳ್ಳಲು ಈ ಸ್ವಾಧೀನವು ಐಟಿಸಿಗೆ ನೆರವಾಗಲಿದೆ.

ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್ ಕಂಪನಿಯು 100ಕ್ಕೂ ಹೆಚ್ಚಿನ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ದಿನಸಿ, ಸಂಬಾರ ಪದಾರ್ಥಗಳು, ಖಾದ್ಯ ತೈಲ, ಪಾನೀಯಗಳು ಈ ಉತ್ಪನ್ನಗಳ ಸಾಲಿಗೆ ಸೇರಿವೆ.

2004ರಲ್ಲಿ ಆರಂಭವಾದ ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್ ಕಂಪನಿಯು 2023–24ರಲ್ಲಿ ₹306 ಕೋಟಿ ವರಮಾನ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.