ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್ ಏರ್‌ವೇಸ್ 13 ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನ ಹಾರಾಟ ರದ್ದು

Last Updated 23 ಮಾರ್ಚ್ 2019, 17:28 IST
ಅಕ್ಷರ ಗಾತ್ರ

ಮುಂಬೈ: ಹಣಕಾಸು ಮುಗ್ಗಟ್ಟಿನಿಂದ ತತ್ತರಿಸುತ್ತಿರುವಜೆಟ್ ಏರ್‌ವೇಯ್ಸ್ ಏಪ್ರಿಲ್ ತಿಂಗಳ ಅಂತ್ಯದವರೆಗೆ ತನ್ನ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಇದಲ್ಲದೆ, ಬಾಡಿಗೆ ಪಾವತಿಸದ ಕಾರಣ ಏಳು ವಿಮಾನಗಳು ಹಾರಾಟ ನಿಲ್ಲಿಸಿವೆ. ಇದರೊಂದಿಗೆ ಬಾಡಿಗೆ ನೀಡದೆ ಹಾರಾಟ ನಿಲ್ಲಿಸಿರುವ ವಿಮಾನಗಳ ಸಂಖ್ಯೆ 54ಕ್ಕೇರಿದೆ.

ಇದಲ್ಲದೆ, ಸಂಸ್ಥೆಯು ಮುಂಬೈ , ದೆಹಲಿ ಸೇರಿದಂತೆ ದೇಶದೊಳಗಿನ ಏಳು ಮಾರ್ಗಗಳಲ್ಲಿನ ವಿಮಾನಗಳ ಹಾರಾಟವನ್ನೂ ಕಡಿತಗೊಳಿಸಿದೆ. ಅಲ್ಲದೆ,ಗುತ್ತಿಗೆ ಕರಾರಿನಂತೆ ಬಾಡಿಗೆ ಪಾವತಿಸದೆ ಎರಡು ಹಗುರ ವಿಮಾನಗಳೂ ಸೇರಿದಂತೆ ಏಳು ವಿಮಾನಗಳು ಈಗಾಗಲೆ ವಿಮಾನನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಸದ್ಯಕ್ಕೆ ತಲೆದೋರಿರುವ ಹಣಕಾಸಿನ ಮುಗ್ಗಟ್ಟನ್ನು ಸರಿಪಡಿಸಲು ಮತ್ತು ಎಲ್ಲಾ ವಿಮಾನಗಳನ್ನು ಸಕ್ರಿಯವಾಗಿರಿಸಲು ಈಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಸಂಸ್ಥೆಯು ಹೇಳಿದ್ದು, ಅದಕ್ಕಾಗಿಯೇ ಎಲ್ಲಾ ಮಾಹಿತಿಗಳನ್ನು ಕಾಲಕಾಲಕ್ಕೆ ನೀಡುತ್ತಿರುವುದಾಗಿ ತಿಳಿಸಿದೆ.

ಸಂಸ್ಥೆ ಪುಣೆ-ಸಿಂಗಪೂರ್ ಸೇರಿದಂತೆ ಕೆಲ ಮಾರ್ಗಗಳಲ್ಲಿ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ.ಅಲ್ಲದೆ, ಕಳೆದ ಡಿಸೆಂಬರ್ ನಲ್ಲಿ ಪುಣೆ - ಅಬುದಾಬಿ ನಡುವಿನ ಮಾರ್ಗದ ದರಗಳಲ್ಲಿ ಜೆಟ್ ಏರ್ ವೇಸ್ ಪ್ರಯಾಣಿಕರಿಗಾಗಿ ರಿಯಾಯಿತಿಯನ್ನೂ ಪ್ರಕಟಿಸಲಾಗಿತ್ತು. ಡಿಸೆಂಬರ್ ನಲ್ಲಿ ಸಂಸ್ಥೆಯು ಮುಂಬೈ -ಮ್ಯಾಂಚೆಸ್ಟರ್‌ ನಡುವಿನ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ.

ಅನಿವಾಸಿ ಭಾರತೀಯ ನರೇಶ್ ಘೋಯಲ್ ಸದ್ಯಕ್ಕೆ ಸಂಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ. ಸಂಸ್ಥೆ 1993ರಲ್ಲಿ ಪ್ರಾರಂಭವಾಗಿದ್ದು, ಆರಂಭದಲ್ಲಿ 600 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಆದರೆ, ಹಣಕಾಸಿನ ತೊಂದರೆಯಿಂದಾಗಿ ಈಗ ಕೇವಲ 119 ವಿಮಾನಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT