ಬೆಂಗಳೂರು: ಕಲ್ಯಾಣ್ ಜುವೆಲರ್ಸ್ ಕರ್ನಾಟಕದಲ್ಲಿ ಏಳು ಹಾಗೂ ಒಡಿಶಾ, ಅಸ್ಸಾಂ, ಪುದುಚೆರಿಯಲ್ಲಿ ತಲಾ ಒಂದು ಮಳಿಗೆಯಲ್ಲಿ ವಹಿವಾಟು ಪುನರಾರಂಭಿಸಿದೆ.

‘ರಾಜ್ಯ ಸರ್ಕಾರಗಳು ಅನುಮತಿ ನೀಡಿದ ಬಳಿಕ ಇತರೆ ಕಡೆಗಳಲ್ಲಿಯೂ ಮಳಿಗೆಗಳನ್ನು ತೆಗೆಯಲಾಗುವುದು. ಎಲ್ಲಾ ಮಳಿಗೆಗಳು ತೆರೆದ ಬಳಿಕ ವಹಿವಾಟು ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ’ ಎಂದು ಕಲ್ಯಾಣ್ ಜುವೆಲರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ತಿಳಿಸಿದ್ದಾರೆ.

ಸೆನ್ಕೊ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಹ ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಮಳಿಗೆ ಆರಂಭಿಸುವುದಾಗಿ ತಿಳಿಸಿದೆ.

ಟಾಟಾ ಸಮೂಹದ ತನಿಷ್ಕ್ ಬ್ರ್ಯಾಂಡ್ ದೇಶದಾದ್ಯಂತ ಹಂತ ಹಂತವಾಗಿ 328 ಮಳಿಗೆಗಳು ಕಾರ್ಯಾರಂಭ ಮಾಡಲಿದೆ. ಭಾನುವಾರ 50 ಮಳಿಗೆಗಳು ಆರಂಭವಾಗಿವೆ ಎಂದು ತಿಳಿಸಿದೆ.

ಅಮ್ಮಂದಿರ ದಿನಕ್ಕೆ ತನಿಷ್ಕ್ನಿಂದ ವಿಶೇಷ ಆಭರಣ: ಬೆಂಗಳೂರು:ದೇಶದ ಅತ್ಯಂತ ವಿಶ್ವಾಸಾರ್ಹ ಹಾಗೂ ನೆಚ್ಚಿನ ಆಭರಣ ಬ್ರ್ಯಾಂಡ್ ಆಗಿರುವ ತನಿಷ್ಕ್, ತಾಯಂದಿರ ದಿನಾಚರಣೆಗಾಗಿ ಆಭರಣ ಖರೀದಿಸಲು ಬಯಸುವ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ‘ಹಾರ್ಟ್ ಆಫ್ ಗೋಲ್ಡ್ʼ ಎನ್ನುವ ವಿಶೇಷ ವಿನ್ಯಾಸದ ಆಭರಣಗಳನ್ನು ಪರಿಚಯಿಸಿದೆ.

ಎಲ್ಲಾ ಆಭರಣಗಳ ಬೆಲೆಗಳು ತನಿಷ್ಕ್ದ ವೆಬ್ಸೈಟ್ www.tanishq.co.in ನಲ್ಲಿ ಲಭ್ಯ ಇದೆ. 1,500ಕ್ಕೂ ಹೆಚ್ಚು ಆಭರಣಗಳ ಪಟ್ಟಿ ನೀಡಲಾಗಿದ್ದು ಬೆಲೆ ₹ 5,000ದಿಂದ ಆರಂಭವಾಗಲಿದೆ.

‘ನಮ್ಮ ತಾಯಿ ನಮಗಾಗಿ ಎಷ್ಟು ಶ್ರಮಿಸುತ್ತಾರೆ, ಬೆಂಬಲ ನೀಡುತ್ತಾರೆ ಎನ್ನುವುದು ಈ ಸಂದರ್ಭದಲ್ಲಿ ನಮಗೆಲ್ಲ ಅರಿವಾಗುತ್ತದೆ. ತಾಯಂದಿರ ಎಲ್ಲ ಕೆಲಸ ಹಾಗೂ ಸ್ಥೈರ್ಯದ ಮಾತು ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಮ್ಮ ಗಮನಕ್ಕೆ ಬರುತ್ತದೆ. ಅವರ ‘ಚಿನ್ನದ ಹೃದಯಕ್ಕೆ’ ನಾವು ಕೃತಜ್ಞರಾಗಿದ್ದೇವೆ’ ಎಂದು ಕಂಪನಿಯ ಆಭರಣ, ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ರಂಜನಿ ಕೃಷ್ಣಸ್ವಾಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.