ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್‌ನಿಂದ ಡಿಜಿ ಲಾಕರ್ ಸೌಲಭ್ಯ

Last Updated 19 ಜುಲೈ 2018, 18:54 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಡಿಜಿಟಲ್ ಉಪಕ್ರಮಗಳ ಅಂಗವಾಗಿ ಗ್ರಾಹಕರಿಗಾಗಿ ಡಿಜಿ ಲಾಕರ್ ಸೌಲಭ್ಯವನ್ನು ತನ್ನ ‘ಮನಿಕ್ಲಿಕ್ ಇಂಟರ್‌ನೆಟ್ ಬ್ಯಾಂಕಿಂಗ್ ಚಾನೆಲ್’ ಮೂಲಕ ಗುರುವಾರ ಅನಾವರಣಗೊಳಿಸಿತು.

ಸರ್ಕಾರದಿಂದ ಕೊಡಮಾಡುವ ಡಿಜಿಟಲ್ ದಾಖಲೆಗಳಾದ ಆಧಾರ್ ಸಂಖ್ಯೆ, ಪಾನ್‌ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಸರ್ಟಿಫಿಕೇಟ್ (ಆರ್‌ಸಿ), ಎಲ್‌ಪಿಜಿ ದಾಖಲೆ ಇತ್ಯಾದಿಗಳನ್ನು ಈ ಲಾಕರ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಈ ಡಿಜಿ ಲಾಕರ್ ಸೌಲಭ್ಯದಲ್ಲಿ ಪ್ರತಿ ನೋಂದಾಯಿತ ಸದಸ್ಯರೂ, ಒಂದು ಸ್ವತಂತ್ರ ಅಕೌಂಟ್‌ ಹೊಂದಬಹುದಾಗಿದೆ. ಅದಕ್ಕಾಗಿಯೇ ಪ್ರತಿಯೊಬ್ಬರಿಗೂ 1ಜಿಬಿಯಷ್ಟು ಮಾಹಿತಿಯನ್ನು ಸಂಗ್ರಹಿಸಿಡಬಹುದಾದ ಸ್ಥಳ ಐ ಕ್ಲೌಡ್‌ನಲ್ಲಿ ಲಭ್ಯವಿದ್ದು, ಇದು ಸದಸ್ಯರ ಆಧಾರ ಸಂಖ್ಯೆಗೆ ಜೋಡಣೆಯಾಗಿರುತ್ತದೆ.

ಕರ್ಣಾಟಕ ಬ್ಯಾಂಕ್‌ನ ಗ್ರಾಹಕರೂ ಈಗ ಮನಿಕ್ಲಿಕ್ ಇಂಟರ್‌ನೆಟ್ ಬ್ಯಾಂಕಿಂಗ್ ಅಕೌಂಟ್ ಮೂಲಕ ತಮ್ಮ ಡಿಜಿ ಲಾಕರ್ ಅಕೌಂಟ್‌ ತೆರೆಯಬಹುದಾಗಿದೆ. ಗ್ರಾಹಕರು ಇಂಟರ್‌ನೆಟ್ ಬ್ಯಾಂಕ್ ಖಾತೆಯ ಮೂಲಕ ಲಾಗ್ ಇನ್ ಆಗಿ, ತಮ್ಮ ಡಿಜಿ ಲಾಕರ್ ಖಾತೆಯನ್ನು ಬಳಸಬಹುದು. ಗ್ರಾಹಕರು ಯಾವಾಗ ಬೇಕಾದರೂ, ಯಾವುದೇ ಸ್ಥಳದಿಂದಲೂ ತಮ್ಮ ಡಿಜಿಟಲ್ ದಾಖಲೆಗಳನ್ನು ಬಳಸಬಹುದು ಹಾಗೂ ಅವುಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬಹುದು. ಬಳಕೆದಾರರೆ ತಮ್ಮ ಡಿಜಿಟಲ್ ರುಜು ಇರುವ ಮತ್ತಿತರ ದಾಖಲೆಗಳನ್ನು ಈ ಡಿಜಿ ಲಾಕರ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ.

ನಗರದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಡಿಜಿ ಲಾಕರ್‌ ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ್‌ ಎಂ.ಎಸ್‌., ‘ಡಿಜಿ ಲಾಕರ್ ಸೌಲಭ್ಯವನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ಅವರನ್ನು ಮತ್ತಷ್ಟು ತಂತ್ರಜ್ಞಾನ ಸ್ನೇಹಿಯಾಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಸೌಲಭ್ಯವನ್ನು ಸುಲಲಿತವಾಗಿ ಬಳಸಿ, ತಮ್ಮ ಡಿಜಿಟಲ್ ದಾಖಲೆಗಳನ್ನು ಹಂಚಿಕೊಳ್ಳಬಹುದು. ಅಗತ್ಯವಿದ್ದಲ್ಲಿ ಸಂಬಂಧಿತ ಅಧಿಕಾರಿಗಳ ಪರಿಶೀಲನೆಗೂ ಒದಗಿಸಬಹುದಾಗಿದೆ. ಇದೊಂದು ತಂತ್ರಜ್ಞಾನದ ಅನುಪಮ ಅನುಭೂತಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT