ಮಂಗಳವಾರ, ಏಪ್ರಿಲ್ 20, 2021
29 °C

ಜಿಎಸ್‌ಡಿಪಿ ಕುಸಿತ ಶೇ(–) 2.6ರಷ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು 2020–21ನೇ ಸಾಲಿನಲ್ಲಿ ಶೇಕಡ (–)7.7ರಷ್ಟು ಕುಸಿತ ದಾಖಲಿಸುವ ಅಂದಾಜು ಮಾಡಲಾಗಿದೆ. ಆದರೆ, ರಾಜ್ಯದ ಜಿಡಿಪಿ (ಜಿಎಸ್‌ಡಿಪಿ) ಕುಸಿತದ ಪ್ರಮಾಣವು ಕಡಿಮೆ ಇರಲಿದೆ. ‘ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಜಿಡಿಪಿ ಶೇ(–)2.6ರಷ್ಟು ಕುಸಿತ ಕಾಣಲಿದೆ’ ಎಂದು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾದ 2020–21ನೇ ಸಾಲಿನ ಆರ್ಥಿಕ ಸಮೀಕ್ಷೆಯು ಅಂದಾಜಿಸಿದೆ.

ಕರ್ನಾಟಕದ ಜಿಡಿಪಿಯು ಹಿಂದಿನ ಆರ್ಥಿಕ ವರ್ಷದಲ್ಲಿ ಶೇ 5ರಷ್ಟು ಬೆಳವಣಿಗೆ ಕಂಡಿತ್ತು. ರಾಜ್ಯದ ಕೃಷಿ ಕ್ಷೇತ್ರವು ಶೇ 6.4ರಷ್ಟು ಬೆಳವಣಿಗೆ ದಾಖಲಿಸಲಿದೆ. ಕೈಗಾರಿಕೆ ಮತ್ತು ಸೇವಾ ವಲಯಗಳು ಕ್ರಮವಾಗಿ ಶೇ (–)5.1ರಷ್ಟು, ಶೇ (–)3.1ರಷ್ಟು ಕುಸಿಯಲಿವೆ ಎಂದು ಸಮೀಕ್ಷೆಯು ಅಂದಾಜು ಮಾಡಿದೆ.

ಈಗಿನ ಬೆಲೆಗಳಲ್ಲಿ, ರಾಜ್ಯದ ನಿವ್ವಳ ತಲಾ ಆದಾಯವು 2019–20ನೇ ಸಾಲಿನಲ್ಲಿ ₹ 2.23 ಲಕ್ಷ ಆಗಿತ್ತು. ಇದು 2020–21ನೇ ಸಾಲಿನಲ್ಲಿ ಶೇ 1.6ರಷ್ಟು ಹೆಚ್ಚಳ ಕಾಣಲಿದೆ, ₹ 2.26 ಲಕ್ಷಕ್ಕೆ ತಲುಪಲಿದೆ ಎಂದು ಸಮೀಕ್ಷೆಯು ಹೇಳಿದೆ. ರಾಷ್ಟ್ರೀಯ ತಲಾ ಆದಾಯವು 2020–21ನೇ ಸಾಲಿನಲ್ಲಿ ಶೇ (–)5.4ರಷ್ಟು ಕಡಿಮೆ ಆಗಿ, ₹ 1.26 ಲಕ್ಷ ಆಗಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು