ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರ್ಲಾ ಕುಟುಂಬದ ಉದ್ಯಮಿ ಮಂಜುಶ್ರೀ ಖೇತಾನ್ ನಿಧನ

ಖ್ಯಾತ ಉದ್ಯಮಿ ಬಿ.ಕೆ. ಬಿರ್ಲಾ ಅವರ ಪುತ್ರಿಯಾಗಿದ್ದ ಮಂಜುಶ್ರೀ, ಕೇಸೊರಾಮ್ ಕಂಪನಿ ಅಧ್ಯಕ್ಷೆಯಾಗಿದ್ದರು.
Published 17 ಮೇ 2024, 3:12 IST
Last Updated 17 ಮೇ 2024, 3:12 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿರ್ಲಾ ಕುಟುಂಬದ ಸದಸ್ಯೆಯಾಗಿದ್ದ ಹಾಗೂ ಉದ್ಯಮಿ ಮಂಜುಶ್ರೀ ಖೇತಾನ್ ಅವರು ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಖ್ಯಾತ ಉದ್ಯಮಿ ಬಿ.ಕೆ. ಬಿರ್ಲಾ ಅವರ ಪುತ್ರಿಯಾಗಿದ್ದ ಮಂಜುಶ್ರೀ 2019ರಲ್ಲಿ ತಮ್ಮ ತಂದೆಯ ನಿಧಾನನಂತರ 2019ರಿಂದ ಕೇಸೊರಾಮ್ (Kesoram Industries Limited) ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಗುರುವಾರ ಮೃತರಾಗಿದ್ದಾರೆ.

ಉದ್ಯಮದ ಬೆಳವಣಿಗೆಗೆ ಮಂಜುಶ್ರೀ ಅವರು ತಮ್ಮದೇಯಾದ ಕೊಡುಗೆ ನೀಡಿದ್ದರು ಎಂದು ಬಿ.ಕೆ. ಬಿರ್ಲಾ ಸಮೂಹ ತಿಳಿಸಿದೆ.

ಕೇಸೊರಾಮ್ ಕಂಪನಿ ಬಿರ್ಲಾ ಶಕ್ತಿ ಸಿಮೆಂಟ್ ಸೇರಿದಂತೆ ಟಯರ್, ಇತರ ಉದ್ಯಮಗಳನ್ನು ಮುನ್ನಡೆಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT